ದೇಶ

ಮಹಾರಾಷ್ಟ್ರದ ಭಂಡಾರದ ಆರ್ಡನೆನ್ಸ್ ಕಾರ್ಖಾನೆಯಲ್ಲಿ ಭಾರೀ ಸ್ಫೋಟ: 5 ಮಂದಿ ಸಾವು

ಸ್ಫೋಟದ ಸಮಯದಲ್ಲಿ ಛಾವಣಿಯೊಂದು ಕುಸಿದಿದ್ದು, ಕನಿಷ್ಠ 12 ಜನರು ಅದರ ಅಡಿಯಲ್ಲಿದ್ದರು ಎಂದು ಶ್ರೀ ಕೋಲ್ಟೆ ಹೇಳಿದರು. ಅವರಲ್ಲಿ ಇಬ್ಬರನ್ನು ರಕ್ಷಿಸಲಾಗಿದ್ದು, ಅವಶೇಷಗಳನ್ನು ತೆಗೆಯಲು ಅಗೆಯುವ ಯಂತ್ರವನ್ನು ಬಳಸಲಾಗುತ್ತಿದೆ ಎಂದು ತಿಳಿಸಿದರು.

ಮುಂಬೈ: ನಾಗ್ಪುರ ಬಳಿಯ ಆರ್ಡನೆನ್ಸ್ ಫ್ಯಾಕ್ಟರಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭಾರೀ ಸ್ಫೋಟದಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯ ಕಾರ್ಖಾನೆಯಲ್ಲಿ ಬೆಳಗ್ಗೆ 10.30ರ ಸುಮಾರಿಗೆ ಸ್ಫೋಟ ಸಂಭವಿಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಸಂಜಯ್ ಕೋಲ್ಟೆ ಮಾಹಿತಿ ನೀಡಿದ್ದಾರೆ.

ಇನ್ನೂ ಸ್ಫೋಟದ ಸಮಯದಲ್ಲಿ ಛಾವಣಿಯೊಂದು ಕುಸಿದಿದ್ದು, ಕನಿಷ್ಠ 12 ಜನರು ಅದರ ಅಡಿಯಲ್ಲಿದ್ದರು ಎಂದು ಶ್ರೀ ಕೋಲ್ಟೆ ಹೇಳಿದರು. ಅವರಲ್ಲಿ ಇಬ್ಬರನ್ನು ರಕ್ಷಿಸಲಾಗಿದ್ದು, ಅವಶೇಷಗಳನ್ನು ತೆಗೆಯಲು ಅಗೆಯುವ ಯಂತ್ರವನ್ನು ಬಳಸಲಾಗುತ್ತಿದೆ ಎಂದು ತಿಳಿಸಿದರು. 

ಸ್ಫೋಟದ ತೀವ್ರತೆಯು 5 ಕಿಮೀ ದೂರದಿಂದ ಕೇಳಿಸಿದ್ದು,  ಫ್ಯಾಕ್ಟರಿಯಿಂದ ದಟ್ಟ ಹೊಗೆ ಏಳುತ್ತಿರುವುದು ದೂರದಿಂದ ಸೆರೆ ಹಿಡಿದಿರುವ ವಿಡಿಯೋದಲ್ಲಿ ಕಂಡು ಬಂದಿದೆ. ಘಟನಾ ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚೃಣೆ ನಡೆಸಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ತೊಡಗಿದ್ದಾರೆ.