ಬೀದರ್ : ವಾಯುಭಾರ ಕುಸಿತದ ಹಿನ್ನೆಲೆ, ಕರ್ನಾಟಕದಲ್ಲಿ ಹಿಂಗಾರು ಮಳೆ ಜೋರಾಗಿದ್ದು, ಕಳೆದೊಂದು ವಾರದಿಂದ ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗುತ್ತಿದೆ. ಜನ ಜೀವನ ಕೂಡ ಅಸ್ತವ್ಯಸ್ತವಾಗಿದೆ. ಮಳೆಯಿಂದ ಹಲವೆಡೆ ಗೋಡೆ ಕುಸಿದು, ರಸ್ತೆ ಸಂಪರ್ಕ ಕಡಿತಗೊಂಡು ಅನಾಹುತಗಳು ಸಂಭವಿಸಿವೆ. ಈ ನಡುವೆ ಮನೆಯ ಮುಂದೆ ಇರುವ ನೀರಿನ ತೊಟ್ಟಿಯಲ್ಲಿ ಬಾಲಕಿ ಬಿದ್ದು ಸಾವನ್ನಪ್ಪಿದ ದುರ್ಘಟನೆಯೊಂದು ಬೀದರ್ ಜಿಲ್ಲೆಯ ಹುಲಸೂರು ಪಟ್ಟಣದಲ್ಲಿ ನಡೆದಿದೆ.
ಶ್ರೀನಿಧಿ ವಿಜಯಕುಮಾರ್ ವಟ್ಟಿಗೆ(5) ಸಾವನ್ನಪ್ಪಿ ದಕಂದಮ್ಮ. ಗೆಳೆಯರೊಂದಿಗೆ ಮನೆಯ ಮುಂದೆ ಆಟವಾಡುತ್ತಿದ್ದು, ಮೆಹೆಂದಿ ತೊಳೆಯಲು ಬಾಗಿದಾಗ ಕಾಲು ಜಾರಿ ತೊಟ್ಟಿಯಲ್ಲಿ ಬಿದ್ದು ಬಾಲಕಿ ಸಾವನ್ನಪ್ಪಿದ್ದಾಳೆ. ಕಾರಣ ಬಾಲಕಿ ತೊಟ್ಟಿಯಲ್ಲೇ ಸಾವನ್ನಪ್ಪಿದ್ದು, ಈ ಕುರಿತು ಹುಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.