ಉತ್ತರಪ್ರದೇಶದ ಬಾಗ್‌ಪತ್‌ನ ಬರೌತ್‌ನಲ್ಲಿನ ಜೈನ ಮಂದಿರದಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವಘಡ ಸಂಭವಿಸಿದೆ.. ಲಡ್ಡು ಮಹೋತ್ಸವಕ್ಕಾಗಿ ಹಾಕಿದ್ದ ತಾತ್ಕಾಲಿಕ ಛಾವಣಿ ಕುಸಿದು 6ಕ್ಕೂ ಹೆಚ್ಚು ಭಕ್ತರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ... ಆದಿನಾಥ ದೇವರಿಗೆ ನಿರ್ವಾಣದ ಲಡ್ಡುಗಳನ್ನು ಅರ್ಪಿಸುವ ಕಾರ್ಯಕ್ರಮ ನಡೆಯುತ್ತಿತ್ತು.. ಈ ವೇಳೆ ವೇದಿಕೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ.. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾಡಳಿತ ಸ್ಥಳಕ್ಕೆ ಆಗಮಿಸಿದೆ.. ಪೊಲೀಸರು ಹಾಗೂ ಸ್ಥಳೀಯರ ನೆರವಿನಲ್ಲಿ ರಕ್ಷಣಾ ಕಾರ್ಯಾಚರಣೆ ಮಾಡಲಾಗಿದೆ.. ಘಟನೆ ಕುರಿತು ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿರುವ ಯೋಗಿ ಆದಿತ್ಯನಾಥ್ ಘಟನೆಗೆ ಕಾರಣ ಕೇಳಿದ್ದಾರೆ... ಇಷ್ಟೇ ಅಲ್ಲದೇ ಪರಿಸ್ಥಿತಿ ನಿಯಂತ್ರಣಕ್ಕೆ ಸೂಚಿಸಿದ್ದಾರೆ..