ಕರ್ನಾಟಕ

ಡಿಜಿಟಲ್‌ ಅರೆಸ್ಟ್‌ ಸ್ಕ್ಯಾಮ್…‌ ರಾಜ್ಯದಲ್ಲಿ 109 ಕೋಟಿ ರೂ. ವಂಚನೆ

ದೇಶಾದ್ಯಂತ ಈಗ ಡಿಜಿಟಲ್‌ ಅರೆಸ್ಟ್‌ ಸ್ಕ್ಯಾಮ್‌ ಗೆ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ನೂರಾರು ಕೋಟಿ ವಂಚನೆ ನಡೆಯುತ್ತಿದೆ. ರಾಜ್ಯದಲ್ಲೂ ಡಿಜಿಟಲ್‌ ಅರೆಸ್ಟ್‌ ಬಳಸಿ 109 ಕೋಟಿ ರೂ. ವಂಚನೆ ಮಾಡಲಾಗಿದೆ.

ಬೆಳಗಾವಿ: ದೇಶಾದ್ಯಂತ ಈಗ ಡಿಜಿಟಲ್‌ ಅರೆಸ್ಟ್‌ ಸ್ಕ್ಯಾಮ್‌ ಗೆ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ನೂರಾರು ಕೋಟಿ ವಂಚನೆ ನಡೆಯುತ್ತಿದೆ. ರಾಜ್ಯದಲ್ಲೂ ಡಿಜಿಟಲ್‌ ಅರೆಸ್ಟ್‌ ಬಳಸಿ 109 ಕೋಟಿ ರೂ. ವಂಚನೆ ಮಾಡಲಾಗಿದೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲದ ಅಧಿವೇಶನದ ವಿಧಾನ ಪರಿಷತ್‌ ಕಲಾಪದಲ್ಲಿ ಡಾ.ಜಿ. ಪರಮೇಶ್ವರ್‌ ಅವರು ರಾಜ್ಯದಲ್ಲಿ ಡಿಜಿಟಲ್‌ ಅರೆಸ್ಟ್‌ ಸಂಬಂಧ 641 ಪ್ರಕರಣ ದಾಖಲಾಗಿದ್ದು, ವಂಚಕರು 109 ಕೋಟಿ ದೋಚಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಪ್ರಸ್ತುತ ವರ್ಷದಲ್ಲಿ ಡಿಜಿಟಲ್ ಅರೆಸ್ಟ್ ಸಂಬಂಧಿತ ಒಟ್ಟು 641 ಪ್ರಕರಣಗಳಲ್ಲಿ 109 ಕೋಟಿ ರೂ. ಗೂ ಹೆಚ್ಚು ಮೊತ್ತದ ವಂಚನೆ ಆಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ 27 ಜನರನ್ನು ಅರೆಸ್ಟ್ ಮಾಡಲಾಗಿದ್ದು, 9.45 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಡಿಜಿಟಲ್‌ ಅರೆಸ್ಟ್‌ ಸ್ಕ್ಯಾಮ್‌ ನಲ್ಲಿ ತೊಡಗಿಸಿಕೊಂಡಿದ್ದ 268 ಫೇಸ್ಬುಕ್ ಗ್ರೂಪ್ಗಳು, 465 ಟೆಲಿಗ್ರಾಂ ಗ್ರೂಪ್ಗಳು, 15 ಇನ್ಸ್ಟಾಗ್ರಾಂ ಖಾತೆಗಳು ಹಾಗೂ 61 ವಾಟ್ಸ್ಆಪ್ ಗ್ರೂಪ್ಗಳನ್ನು ನಿಷ್ಕ್ರೀಯಗೊಳಿಸಲಾಗಿದೆ ೆಂದು ಮಾಹಿತಿ ತಿಳಿಸಿದ್ದಾರೆ.

ದೇಶದಾದ್ಯಂತ ಡಿಜಿಟಲ್ ಅರೆಸ್ಟ್ ಪ್ರಕರಣಗಳು ದಿನೇ ದಿನೇ ಅಧಿಕವಾಗುತ್ತಿದ್ದು, ಕಳೆದ ವರ್ಷ ಇಡೀ ದೇಶದಲ್ಲಿ 42,000 ಪ್ರಕರಣ ದಾಖಲಾಗಿದ್ದು, ರಾಜ್ಯದಲ್ಲಿ 11,000 ಪ್ರಕರಣ ದಾಖಲಾಗಿದೆ. ಸಾರ್ವಜನಿಕರು ಸೈಬರ್ ವಂಚನೆ ಆದ ಕೂಡಲೇ ಉಚಿತ ಸಹಾಯವಾಣಿ ಸಂಖ್ಯೆ 1930 ಗೆ ಮಾಹಿತಿ ನೀಡುವಂತೆ ತಿಳಿಸಿದರು.