ಹೊಸ ವರ್ಷಾಚರಣೆಗೆ ದಿನಗಣನೆ ಆರಂಭವಾಗಿದೆ. ಮಾದಕ ವಸ್ತುಗಳ ಮೇಲೆ ಕಣ್ಣಿಟ್ಟಿರುವ ಪೊಲೀಸರು, ರೈಲಿನ ಮೂಲಕ ಸಪ್ಲೈ ಆಗುತ್ತಿದ್ದ ಕೆಜಿಗಟ್ಟಲೆ ಗಾಂಜಾ ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಎಂಟು ಮಂದಿ ಗಾಂಜಾ ಪೆಡ್ಲರ್‌ಗಳನ್ನು ಕೂಡ ಬಂಧಿಸಿದ್ದಾರೆ. ಸಿಟಿ ಗಡಿ ಭಾಗದಲ್ಲಿ ಚೆಕ್‌ಪೋಸ್ಟ್‌ಗಳನ್ನು ಹಾಕಿ ಚೆಕಿಂಗ್‌ಗೆ ಮುಂದಾಗಿರುವ ಪೊಲೀಸರಿಗೇ ಚಳ್ಳೆ ಹಣ್ಣು ತಿನ್ನಿಸಿದ್ದಾರೆ.
ಆಂಧ್ರ ಪ್ರದೇಶ, ತಮಿಳುನಾಡು, ಒಡಿಶಾದಲ್ಲಿ ಗಾಂಜಾಗೆ ಹೆಚ್ಚು ಬೇಡಿಕೆ ಇದ್ದು, ವಾಹನಗಳಲ್ಲಿ ಸರಬರಾಜು ಮಾಡಿದ್ರೆ ಸಿಕ್ಕಿ ಬೀಳುವ ಭಯದಿಂದ, ರೈಲು ಭೋಗಿಗಳಲ್ಲಿ ಸಪ್ಲೈ ಮಾಡಿದ್ದಾರೆ. ಇದೀಗ ರೈಲ್ವೆ ಪೊಲೀಸರಿಂದ ಸ್ಪೆಷಲ್ ಡ್ರೈವ್ ನಡೆದಿದ್ದು, ಪ್ರಶಾಂತಿ ಮತ್ತು ಹಟಿಯಾ ಎಕ್ಸ್‌ಪ್ರೆಸ್ ಭೋಗಿಗಳಲ್ಲಿ ತಲಾಶ್ ನಡೆದಿದೆ. ಎರಡೇ ದಿನದಲ್ಲಿ ಬರೋಬ್ಬರಿ ಒಂದು ಕೋಟಿ ಮೌಲ್ಯದ ಗಾಂಜಾ ಸೀಜ್ ಆಗಿದೆ. ಎಂಟು ಮಂದಿಯನ್ನು ರೈಲ್ವೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.