ವೈರಲ್
ಉದಯಗಿರಿ ಕಲ್ಲು ತೂರಾಟ ಕೇಸ್; ಎಂಟು ಮಂದಿ ಆರೋಪಿಗಳು ಲಾಕ್..!
ಮೈಸೂರಿಗೆ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ ಸಂಬಂಧ, ತನಿಖೆಗಿಳಿದ ಪೊಲೀಸರು ಎಂಟು ಮಂದಿ ಆರೋಪಿಗಳಿಗೆ ಬಲೆ ಬೀಸಿ ಸೆರೆ ಹಿಡಿದಿದ್ದಾರೆ.
ಮೈಸೂರಿಗೆ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ ಸಂಬಂಧ, ತನಿಖೆಗಿಳಿದ ಪೊಲೀಸರು ಎಂಟು ಮಂದಿ ಆರೋಪಿಗಳಿಗೆ ಬಲೆ ಬೀಸಿ ಸೆರೆ ಹಿಡಿದಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ಕಲ್ಲು ತೂರಾಟದ ಸಮಯದಲ್ಲಿ ಸ್ಥಳದಲ್ಲಿದ್ದವರನ್ನು ಪತ್ತೆ ಹಚ್ಚಿದ್ದಾರೆ. ಸುಹೇಲ್ ಅಲಿಯಾಸ್ ಸೈಯದ್ ಸುಹೇಲ್, ರಹೀಲ್ ಪಾಶಾ, ಸೈಯದ್ ಸಾದಿಕ್, ಅಯಾನ್ ಜಬೀವುಲ್ಲಾ, ಏಜಾಜ್, ಸಾದಿಕ್ ಪಾಷಾ, ಶೋಯೇಬ್ ಪಾಷಾ ಸೇರಿ ಎಂಟು ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಮತ್ತಷ್ಟು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.