ದೇಶ

ವಾಷಿಂಗ್ ಮಷಿನ್ ಒಳಗಿತ್ತು 5 ಅಡಿಯ ನಾಗರಹಾವು..!

ಶಂಭುದಯಾಳ್ ಎನ್ನುವವರು ವಾಷಿಂಗ್ ಮೆಷಿನ್ ಮುಚ್ಚಳ ತೆಗೆದು ನೋಡಿದಾಗ ಅಲ್ಲಿ ನಾಗರಹಾವೊಂದು ಮುದುಡಿ ಮಲಗಿತ್ತು. ಸುಮಾರು 5 ಅಡಿಯ ಹಾವು ನೋಡಿ ಭಯಗೊಂಡ ಅವರು ಕೂಡಲೇ ನೆರೆ ಮನೆಯವರಿಗೆ ತಿಳಿಸಿದ್ದಾರೆ.

ಮನೆಯೊಳಗೆ ಹಾವು ಬರೋದು ಅಚ್ಚರಿಯ ವಿಷಯವೇನಲ್ಲಾ ಆದರೆ ಒಂದು ಮನೆಯ ವಾಷಿಂಗ್ ಮಷಿನ್ ಒಳಗೆ ನಾಗರಹಾವು ಪತ್ತೆಯಾದ ಘಟನೆ ರಾಜಾಸ್ತಾನದ ಕೋಟಾದಲ್ಲಿರುವ ಸ್ವಾಮಿ ವಿವೇಕಾನಂದ ನಗರ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.

ಶಂಭುದಯಾಳ್ ಎನ್ನುವವರು  ವಾಷಿಂಗ್ ಮೆಷಿನ್ ಮುಚ್ಚಳ ತೆಗೆದು ನೋಡಿದಾಗ ಅಲ್ಲಿ ನಾಗರಹಾವೊಂದು ಮುದುಡಿ ಮಲಗಿತ್ತು. ಸುಮಾರು 5 ಅಡಿಯ  ಹಾವು ನೋಡಿ ಭಯಗೊಂಡ ಅವರು ಕೂಡಲೇ ನೆರೆಹೊರೆ ಮನೆಯವರಿಗೆ ತಿಳಿಸಿದ್ದಾರೆ. ಬಳಿಕ ಹಾವು ಹಿಡಿಯುವವರಿಗೆ ಕರೆ ಮಾಡಿದ್ದಾರೆ.  ಹಾವು ಹಿಡಿಯುವ ತಜ್ಞರು ಹಾವನ್ನ ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. 

ಬಿಸಿಲಿಗೆ, ಮಳೆಗಾಲದಲ್ಲಿ ಹಾವು ಮನೆಯೊಳಗೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಎಚ್ಚರಿಕೆಯಿಂದಿರುವುದು ಒಳ್ಳೆಯದು.