ಮಂಗೋಲಿಯಾದ ಉಲಾನ್‌ಬಾಟರ್‌ನಲ್ಲಿ ಗುರುವಾರ (ಸೆ.19) ನಡೆದ ಸ್ನೂಕರ್ ಪಂದ್ಯಾವಳಿಯಲ್ಲಿ ಕೀರ್ತನಾ ಪಾಂಡಿಯನ್ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಕನ್ನಡ ನಾಡಿಗೆ ಹೆಮ್ಮೆ ತಂದಿದ್ದಾರೆ.
ಮೂಲತಃ ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ದಾಸರಹೊಸಹಳ್ಳಿ ನಿವಾಸಿಯಾದ ಕೀರ್ತನಾ ಬೆಮಲ್ ನೌಕರ ಪಾಂಡಿಯನ್ ದಂಪತಿ ಪುತ್ರಿ. ಈ ಮೂಲಕ ಚಿನ್ನದ ನಾಡಿನ ಯುವತಿ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ.
ಇದಕ್ಕೂ ಮುನ್ನ ಜಾಗತಿಕ ಮಟ್ಟದಲ್ಲಿ ಹಲವು ಪದಕಗಳನ್ನು ಗಳಿಸಿರುವ ಕೀರ್ತನಾ ಇದೀಗ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದು ತಮ್ಮದಾಗಿಸಿಕೊಂಡಿದ್ದಾರೆ.