ಸಾಮಾಜಿಕ ಜಾಲತಾಣ
ಅಂದ್ಮೇಲೆ ಕೆಲವರು ನೀವು ಮಾಡೋ ವಿಡಿಯೋಗಳನ್ನ ನೋಡಿ ಬೆಂಬಲಿಸೋರು ಇರ್ತಾರೆ, ಹಾಗೆ ತೆಗಳಿ ಉಪ್ಪು
ಖಾರ ಹಾಕೋರೂ ಇರ್ತಾರೆ, ಇದು ಸರ್ವೇ ಸಾಮಾನ್ಯವಾಗಿ ಹೋಗಿದೆ, ಆದ್ರೆ ಅದೊಂದು ವೀಡಿಯೋದಲ್ಲಿ ಆಡಿದ
ಅದೊಂದು ಮಾತು ಈಗ ಯೂಟ್ಯೂಬರ್ ಒಬ್ಬನ ಮೇಲೆ ಕೇಸ್ ಬೀಳುವಂತೆ ಮಾಡಿದೆ..
ಹೌದು ಅದೊಂದು
ವೀಡಿಯೋದಲ್ಲಿ, ಇದೇ ‘ದೀಪಕ್’ ಮೇಷ್ಟ್ರು ನಮ್ಮಪ್ಪ ಕಣೋ ನಾನಲ್ಲ, ರೌಡಿಗಳ ಸಂಪರ್ಕ ಬೇಕು ಅಂದ್ರೆ
ನನಗೆ ಕೇಳು, ಎರಡು ನಿಮಿಷ ಹೆಂಡ್ತಿ ಮಗನನ್ನ ಸೈಡಿಗಿಟ್ಟೆ ಅಂದ್ಕೋ ನನಗಿಂತಾ ದೊಡ್ಡ ರೌಡಿನೇ ಇಲ್ಲ
ಕಣೋ ಬೆಂಗಳೂರಿನಲ್ಲಿ ಅಂತಾ ಹೇಳೋ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ..
ಸಾಮಾಜಿಕ
ಮಾಧ್ಯಮದಲ್ಲಿ ವಿಡಿಯೋ ಹಾಕಿ ಸಾರ್ವಜನಿಕರಲ್ಲಿ ಸುರಕ್ಷತಾ
ಭಯವನ್ನು ಉಂಟುಮಾಡಿರುವ DV ಖ್ಯಾತಿಯ ದೀಪಕ್ ಎಂಬ ವ್ಯಕ್ತಿಯನ್ನು ಪತ್ತೆ
ಮಾಡಿ, ವಶಕ್ಕೆ ಪಡೆದು, ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಿದ್ದಾರೆ.