ಕಲ್ಬುರ್ಗಿಯಲ್ಲಿ ಕಾರ್ಮಿಕ ಒಬ್ಬ ಹೃದಾಯಘಾತದಿಂದ ಸಾವನ್ನಪ್ಪಿದ್ದಾರೆ . ಆ ವ್ಯಕ್ತಿಯ ಮೃತ ದೇಹವನ್ನ ಜೊತೆಯಲ್ಲಿದ್ದ ಇತರ ಕಾರ್ಮಿಕರು ಎಳೆದು ಹೊಗಿರುವ ರೀತಿಯೂ ಹೃದಯ ವಿದ್ರಾಕವಾಗಿದ್ದು, ಈ ಘಟನೆ ಇಡೀ ರಾಜ್ಯದಲ್ಲಿ ಸುದ್ದಿ ಮಾಡಿದೆ. ಈ ಬೆನ್ನಲ್ಲೇ ಕಾರ್ಮಿಕ ಸಚಿವರು ಘಟನೆ ಸಂಬಂಧ 6 ಜನ ಕಾರ್ಮಿಕರನ್ನ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದು ಸದ್ಯ ಎಲ್ರಿಗೂ ಗೊತ್ತಿರುವ ಇರುವ ಮಾಹಿತಿಯಾಗಿದೆ . ಇನ್ನೂ ಹೆಚ್ಚು ಮಾಹಿತಿಯೆಂದರೆ ಈ ಮೃತ ವ್ಯಕ್ತಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬಂದು ಕೆಲಸ ಮಾಡುವ ಅಂತರ್ ರಾಜ್ಯ ವಲಸೆ ಕಾರ್ಮಿಕ. ಈ ಪ್ರಕಾರ ವಲಸೆ ಕಾರ್ಮಿಕರ ಉದ್ಯೋಗ ನಿಯಮಗಳು ಮತ್ತು ಸೇವಾ ಷರತ್ತುಗಳು1979 ಕಾಯ್ದೆಯೂ ಈ ಮೃತ ವ್ಯಕ್ತಿಗೆ ಅನ್ವಯ ಆಗುತ್ತದೆ.
ಕಲ್ಬುರ್ಗಿ ಶ್ರೀ ಸಿಮೆಂಟ್ ಕಾರ್ಖಾನೆಯಲ್ಲಿ ಶವ ಎಳೆದ್ಯೊಯ್ದ ಘಟನೆ ನಡೆದಿದೆ. ಉತ್ತರ ಭಾರತದ ಬಿಹಾರದ ಕಾರ್ಮಿಕ ಚಂದನ್ ಸಿಂಗ್ ಸಾವನ್ನಪ್ಪಿರುವ ಕಾರ್ಮಿಕ ಆಗಿದ್ದಾರೆ. ಮೃತನಂತೆ ಬಿಹಾರ್‌ನಿಂದ ಬಂದವರಾದ ಹೈದರ್‌ಆಲಿ, ಅಜಯ್ , ರವಿಶಂಕರ್ , ಹರಿಂದರ್ ,ರಮೇಶ್ಛಂದ್ರ ಹಾಗೂ ಅಖಿಲೇಶ್ ಎಂಬುವವರು ಶವ ಎಳೆದು ಹೊಗಿರುವ ರೀತಿ ತಪ್ಪು ಎಂದು ಈಗ ಕಂಬಿ ಹಿಂದೆ ಇದ್ದಾರೆ.
ಹೌದು , ಮೃತ ವ್ಯಕ್ತಿ ಕಾನೂನಿನ ಮಾನ್ಯತೆ ಪ್ರಕಾರ ಶವವನ್ನ ಅಗೌರವದಿಂದ ನಡೆಸಿಕೊಳ್ಳುವಂತಿಲ್ಲ. ಎಳೆದು ಹೋಗುವುದು , ಅಂತ್ಯ ಸಂಸ್ಕಾರ ಮಾಡದೇ ಇರುವುದು , ಅಗೌರವ ತೋರಿಸುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ , ದಂಡ ಕಟ್ಟಬೇಕಾದಂತಹ ತಪ್ಪು ಆಗಿದೆ. ಈ ಮಧ್ಯೆ , ಈ ಕಾರ್ಮಿಕರು ಶವವನ್ನ ಎಳೆದು ಹೋದ ಮೇಲೆ ಗುತ್ತಿಗೆ ಕಂಪನಿ ಪರಿಹಾರ ಕೊಡಬೇಕು ? ಸತ್ತ ವ್ಯಕ್ತಿಗೆ ,ಕುಟುಂಬಕ್ಕೆ ಪರಿಹಾರ ಕೊಡಬೇಕೆಂದು ಹೋರಾಟ ಮಾಡಿದ್ದಾರೆ. ಇದಂತೂ ನ್ಯಾಯಯುತವಾಗಿದೆ.
1.ಅಂತರ್ ರಾಜ್ಯ ಕಾರ್ಮಿಕ ಚಂದನ್ ಸಿಂಗ್ ಸಾವಿಗೆ ಪರಿಹಾರ ನೀಡಬೇಕು
2.ಗುತ್ತಿಗೆ ಕಂಪನಿ ಈ ಜವಾಬ್ದಾರಿ ವಹಿಸಿಕೊಳ್ಳಬೇಕು
3.ಸಿಮೆಂಟ್ ಕಂಪನಿಯೂ ಗುತ್ತಿಗೆ ಉದ್ಯೋಗಿ ಅಂತಾ ನಿರ್ಲಕ್ಷ್ಯ ತೋರುವಂತಿಲ್ಲ , ಕಾರ್ಮಿಕ ಎಂಬ ಆಧಾರದಲ್ಲಿ ಪರಿಹಾರ ನೀಡಬೇಕು
ಹೋರಾಟ ಹಾಗೂ ಮೃತ ದೇಹದೊಂದಿಗೆ ನಡೆದು ಕೊಂಡ ರೀತಿ ನಿಜಕ್ಕೂ ಅಮಾನವೀಯ . ಆದ್ರೆ , ಮೃತ ಕಾರ್ಮಿಕನ ಕುಟುಂಬಕ್ಕೆ ಪರಿಹಾರ ಕೊಡಲಿ ಎಂಬ ಹೋರಾಟ ನ್ಯಾಯ - ಕಾನೂನು ಸಮ್ಮತವಾಗಿದೆ. ಹೀಗಾಗಿ ಕಾರ್ಮಿಕ ಇಲಾಖೆ ಈ ಬೇಡಿಕೆಗಳಿಗೆ ಸೇತುವೆಯಂತೆ ಕರ್ತವ್ಯ ಮಾಡಬೇಕಿದೆ.