ಕರ್ನಾಟಕ

ಬೆಸ್ಕಾಂ ಇಲಾಖೆಯ ಎಡವಟ್ಟಿಗೆ ಬಸವ ಬಲಿ..!

ಬೆಸ್ಕಾಂ ಇಲಾಖೆ ನಿರ್ಲಕ್ಷ್ಯಕ್ಕೆ ದಾರಿಯಲ್ಲಿ ಹೋಗ್ತಿದ್ದ ಭದ್ರ ಹೆಸರಿನ ಗೋಸಲ ಚನ್ನಬಸವೇಶ್ವರ ದೇಗುಲದ ಬಸವ ಹಠಾತ್‌ ವಿದ್ಯತ್‌ ಸ್ಪರ್ಶವಾಗಿ ಸ್ಥಳದಲ್ಲೇ ಪ್ರಾಣ ಬಿಟ್ಟಿದೆ.

ತುಮಕೂರು : ಬೆಸ್ಕಾಂ ಇಲಾಖೆ ನಿರ್ಲಕ್ಷ್ಯಕ್ಕೆ ದಾರಿಯಲ್ಲಿ ಹೋಗ್ತಿದ್ದ ಭದ್ರ ಹೆಸರಿನ ಗೋಸಲ ಚನ್ನಬಸವೇಶ್ವರ ದೇಗುಲದ ಬಸವ ಹಠಾತ್‌ ವಿದ್ಯತ್‌ ಸ್ಪರ್ಶವಾಗಿ ಸ್ಥಳದಲ್ಲೇ ಪ್ರಾಣ ಬಿಟ್ಟಿದೆ. ಈ ಘಟನೆ ಗುಬ್ಬಿ ಪಟ್ಟಣದ‌ ಮಹಾಲಕ್ಷ್ಮಿ ಬಡಾವಣೆಯಲ್ಲಿ ನಡೆದಿದೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾಗಿದೆ.

ಗುಬ್ಬಿ ಪಟ್ಟಣದ ಸುತ್ತಲೂ  ದೈವ ಸ್ವರೂಪವಾಗಿ ಓಡಾಟ ನಡೆಸಿಕೊಂಡು ಗೋಸಲ ಚನ್ನಬಸವೇಶ್ವರ ದೇವಸ್ಥಾನಕ್ಕೆ ಬರುತ್ತಿತ್ತು.ಆದ್ರೆ ಎಡಬಿಡದೇ ಸುರಿಯುತ್ತಿದ್ದ ಮಳೆಯಿಂದ ವಿದ್ಯುತ್‌ ಕಂಬಗಳಲ್ಲಿನ ವೈರ್‌ಗಳಿಂದ ಕರಂಟ್‌ ನೆಲದಲ್ಲಿ ಹರಿದಾಡಿದೆ. ತನ್ನಷ್ಟಕ್ಕೆ ತಾನು ರಸ್ತೆ ಬದಿಯಿದ್ದ ವಿದ್ಯುತ್ ಕಂಬದ ಬಳಿ ಬರುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಬಸವ ಸ್ಥಳದಲ್ಲೇ ಸಾವನ್ನಪ್ಪಿದೆ. ಬೆಸ್ಕಾಂ ಇಲಾಖೆಯ ಬೇಜವ್ದಾರಿತನಕ್ಕೆ ದೇಗುಲದ ಬಸವ ಸಾವು ಎಂದು ಸ್ಥಳೀಯರು ಆರೋಪ ಮಾಡಿದ್ದು, ಬೆಸ್ಕಾಂ ವಿರುದ್ಧ ಆಕ್ರೋಶಗೊಂಡಿದ್ಧಾರೆ. 

ಸದ್ಯ ಮೃತಪಟ್ಟ ದೇಗುಲದ ಬಸವನಿಗೆ ಪೂಜೆ ಸಲ್ಲಿಸಿ, ಗುಬ್ಬಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಅಂತ್ಯಕ್ರಿಯೆ ಮಾಡಲಾಗಿದೆ.