ಕರ್ನಾಟಕ

ಅಕ್ರಮವಾಗಿ ನಾಡ ಬಂದೂಕುಗಳನ್ನ ಮಾರಾಟ ಮಾಡ್ತಿದ್ದ ಗ್ಯಾಂಗ್‌ ಬಂಧನ..!

ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ತುಮಕೂರು ಪೊಲೀಸರು ಪತ್ತೆ ಹಚ್ಚಿದ್ದಾರೆ.

ತುಮಕೂರು: ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ತುಮಕೂರು ಪೊಲೀಸರು ಪತ್ತೆ ಹಚ್ಚಿದ್ದಾರೆ. ಗುಬ್ಬಿ ತಾಲೂಕಿನ ತಿಪ್ಪೂರಿನಲ್ಲಿ ಅಕ್ರಮವಾಗಿ ಪರವಾನಗಿ ಇಲ್ಲದೇ ನಾಡ ಬಂದೂಕನ್ನ ಇಟ್ಟುಕೊಂಡಿದ್ದ ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಇನ್ನು ಟಿ.ಆರ್.ಮಧುಚಂದ್ರ (29), ಎಸ್.ಶಿವಕುಮಾರ್ (24), ಉದ್ದೆ ಹೊಸಕೆರೆಯ ಮಂಜುನಾಥ್ (39), ಹಂದನಕೆರೆಯ ತಿಮ್ಮರಾಜು (45) ಮತ್ತು ರವೀಶ್ (50), ತುಮಕೂರು ಪಟ್ಟಣದ ಇಮ್ರಾನ್ ಪಾಷಾ (40) ಬಂಧಿತ ಆರೋಪಿಗಳಾಗಿದ್ದರೆ.