ಕರ್ನಾಟಕ

ಬೋನಿಗೆ ಬಿದ್ದ ಗಂಡು ಚಿರತೆ

ಬೆಟ್ಟದ ಬಳಿ ಇರುವ ಜಮೀನಿನಲ್ಲಿ ಚಿರತೆ ಓಡಾಡುವ ದೃಶ್ಯವನ್ನ ಜಮೀನಿನ ಮಾಲೀಕ ಮಂಜುನಾಥ್ ಎಂಬುವವರು ಗುಟ್ಟಾಗಿ ಮೊಬೈಲ್ ನಲ್ಲಿ ಸೆರೆಹಿಡಿದು ಅರಣ್ಯಾಧಿಕಾರಿಗಳಿಗೆ ಕಳುಹಿಸಿದ್ದರು.

ಮಂಡ್ಯ :  ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿಕ್ಕಮರಳಿ-ಗಾಣದಹೊಸೂರು ಮಧ್ಯ ಭಾಗದಲ್ಲಿ ಇರುವ ಬೆಟ್ಟದ ಬಳಿ ಎರಡು ಚಿರತೆ ಸ್ಥಳೀಯರಿಗೆ ಕಾಣಿಸಿಕೊಂಡಿದ್ದವು. ಬೆಟ್ಟದ ಬಳಿ ಇರುವ ಜಮೀನಿನಲ್ಲಿ ಚಿರತೆ ಓಡಾಡುವ ದೃಶ್ಯವನ್ನ ಜಮೀನಿನ ಮಾಲೀಕ ಮಂಜುನಾಥ್ ಎಂಬುವವರು ಗುಟ್ಟಾಗಿ ಮೊಬೈಲ್ ನಲ್ಲಿ ಸೆರೆಹಿಡಿದು ಅರಣ್ಯಾಧಿಕಾರಿಗಳಿಗೆ ಕಳುಹಿಸಿದ್ದರು.

ವಿಷಯ ತಿಳಿದು ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿ ಚಿರತೆ ಸೆರೆಗಾಗಿ ಬೋನ್‌ ಇರಿಸಿದ್ರು. ಇಂದು ಬೆಳಿಗ್ಗೆ ಒಂದು ಚಿರತೆ ಬೋನ್ ಗೆ ಬಿದ್ದಿದ್ದು, ಗಂಡು ಚಿರತೆ ಎಂದು ತಿಳಿದು ಬಂದಿದೆ. ಮತ್ತೊಂದು ಚಿರತೆ ಸೆರೆಗೆ ಅರಣ್ಯಾಧಿಕಾರಿಗಳು ಮತ್ತೆ ಬೋನ್ ಇರಿಸಿದ್ದಾರೆ.