ಇಂಡೋನೇಷ್ಯಾದ ಯುವಕನೊಬ್ಬ ಮದುವೆಯಾಗಲು ಹುಡುಗಿ ಸಿಗಲಿಲ್ಲ ಎಂದು, ಕುಕ್ಕರ್ ಜೊತೆ ಮದುವೆಯಾಗಿದ್ದಾನೆ. ಯುವಕನ ಮ್ಯಾರೇಜ್ ಫೋಟೋಗಳು ವೈರಲ್ ಆಗುತ್ತಿದ್ದು, ಮಧುಮಗ ಬಿಳಿ ಬಟ್ಟೆ ತೊಟ್ಟು ಕುಕ್ಕರ್ಗೆ ಹುಡುಗಿಯಂತೆ ಶಾಲು ಹೊದಿಸಿದ್ದಾನೆ. ಜೊತೆಗೆ ಕುಕ್ಕರ್ ಹಿಡಿದು ನವ ವಿವಾಹಿತರಂತೆ ಫೋಟೋಗಳನ್ನು ಕೂಡ ತೆಗೆಸಿಕೊಂಡಿದ್ದಾನೆ.

ಇಂಡೋನೇಷ್ಯಾದ ಈ ಯುವಕ ಕುಕ್ಕರ್ ಹಿಡಿದು ಮುತ್ತಿಡುತ್ತಿರುವ ಫೋಟೋ ಭಾರಿ ನಗೆಪಾಟಲಿಗೀಡು ಮಾಡಿದೆ.

ಕುಕ್ಕರ್ನ ಮದುವೆಯಾಗಿರುವ ಯುವಕನ ಹೆಸರು ಖೋಯಿರುಲ್ ಅನಮ್ ಎಂದು ಗುರುತಿಸಲಾಗಿದೆ.