ಕರ್ನಾಟಕ

ಕ್ಲುಲ್ಲಕ ಕಾರಣಕ್ಕೆ ಸ್ನೇಹಿತನ ಕತ್ತು ಸೀಳಿ ಕೊಲೆ...ಪೊಲೀಸರಿಗೆ ಕರೆ ಮಾಡಿ ಶರಣಾದ ಆರೋಪಿ..!

ಸ್ನೇಹಿತರಿಬ್ಬರ ನಡುವೆ ನಡೆದ ಜಗಳ ತಾರಕಕ್ಕೇರಿ, ಓರ್ವನ ಕೊಲೆ ನಡೆದಿದೆ. ಕೊಲೆ ಮಾಡಿದ ಸ್ನೇಹಿತ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ವ್ಯಕ್ತಿಯೊಬ್ಬ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನು ಕೊಲೆ ಮಾಡಿ, ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ. 32 ವರ್ಷದ ಪ್ರಶಾಂತ್ ಶೆಟ್ಟಿ ಎಂಬಾತನನ್ನು, ವಿಜಯನಗರ ಜಿಲ್ಲೆ ಮೂಲದ ಈರಣ್ಣ ಯಾನೆ ದಿನೇಶ್ ಎಂಬಾತ ಕೊಲೆಗೈದಿದ್ದಾನೆ. 

ಇಬ್ಬರೂ ಕಂಠಪೂರ್ತಿ ಕುಡಿದು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿ, ಈರಣ್ಣ ಕತ್ತಿಯಿಂದ ಪ್ರಶಾಂತ್ ಕತ್ತು ಸೀಳಿದ್ದಾನೆ. ಇದರಿಂದ ಪ್ರಶಾಂತ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಈರಣ್ಣ ತಾನೇ ಖುದ್ದಾಗಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಕೂಡಲೇ ಆತನನ್ನು ವಶಕ್ಕೆ ಪಡೆದು  ಠಾಣೆಗೆ ಕರೆದೊಯ್ದಿದ್ದಾರೆ.