ವಿದೇಶ

6 ತಿಂಗಳ ಬಳಿಕ ಕೋಮಾದಿಂದ ಎಚ್ಚರ..ಆಸ್ಪತ್ರೆ ಬಿಲ್ ನೋಡಿ ಶಾಕ್

ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಕೋಮಾಗೆ ಹೋಗಿದ್ದ ವ್ಯಕ್ತಿ, ಕೋಮಾದಿಂದ ಎಚ್ಚರವಾದ ಕೂಡಲೇ ಆಸ್ಪತ್ರೆ ಬಿಲ್ ನೋಡಿ ಶಾಕ್ ಆಗಿದ್ದಾರೆ. 2.5 ಮಿಲಿಯನ್ ಡಾಲರ್ ಬಿಲ್ ಬಂದಿದೆ ಎಂದು ದಂಗಾಗಿದ್ದಾರೆ.

ಕಾರು ಅಪಘಾತದಲ್ಲಿ ಗಾಯಗೊಂಡು ಕೋಮಾಗೆ ಹೋಗಿದ್ದ ವ್ಯಕ್ತಿ, ಎಚ್ಚರವಾದ ಕೂಡಲೇ ಆಸ್ಪತ್ರೆ ಬಿಲ್ ನೋಡಿ ಶಾಕ್ ಆಗಿದ್ದಾರೆ. ಲಾಸ್ ವೇಗಾನ್ನ ಜಾನ್ ಪೆನ್ನಿಂಗ್ಟನ್ ಎಂಬುವರು, ತಾವು 6 ತಿಂಗಳ ಕಾಲ ಕೋಮಾದಲ್ಲಿ ಇರುವ ಬಗ್ಗೆ ಗೊತ್ತೇ ಇರಲಿಲ್ಲ. ಎಚ್ಚರವಾದಾಗ ಆಸ್ಪತ್ರೆಯಲ್ಲಿದ್ದ ವ್ಯಕ್ತಿ 2.5 ಮಿಲಿಯನ್ ಡಾಲರ್ ಆಸ್ಪತ್ರೆ ಬಿಲ್ ನೋಡಿ ದಂಗಾಗಿದ್ದಾರೆ. 

ಎಂದಿನಂತೆ ಬೆಳಗ್ಗೆ ಆಫೀಸ್ಗೆ ಹೋಗುವಂತೆ ಎಚ್ಚರಗೊಂಡ ಜಾನ್ಗೆ, ತಾನು ಮಲಗಿರುವುದು ಆಸ್ಪತ್ರೆ ಬೆಡ್ ಎಂದು ತಿಳಿದೇ ಇರಲಿಲ್ಲ. ಬಳಿಕ ನರ್ಸ್ ಬಂದು ಹೇಳಿದ ಬಳಿಕ, 6 ತಿಂಗಳ ಹಿಂದೆ ಜಾನ್ಗೆ ಕಾರು ಅಪಘಾತವಾಗಿ ಮೆದುಳಿನಲ್ಲಿ  ತೀವ್ರ ರಕ್ತಸ್ರಾವ ಆಗಿತ್ತು ಎಂಬುದು ತಿಳಿದು ಬಂದಿದೆ. ಇನ್ನು ಬಿಲ್ ನೋಡಿ ಶಾಕ್ ಆದ ಜಾನ್ಗೆ, ಅವರ ವಕೀಲರು ಸಹಾಯ ಮಾಡಲು ಮುಂದಾಗಿದ್ದು, ಆಸ್ಪತ್ರೆ ಬಿಲ್ ಭರಿಸಿದ ಜಾನ್ ನಿಟ್ಟುಸಿರು ಬಿಟ್ಟಿದ್ದಾರೆ.