ವೈರಲ್

ನನ್ನ ಮಗನನ್ನ ಸಾಯಿಸಲು ಪರ್ಮಿಷನ್ ಕೊಡಿ ಎಂದ ತಾಯಿ..ಯಾಕೆ ಗೊತ್ತಾ..?

ಮಗನನ್ನು ಜೈಲಿಗೆ ಹಾಕಿ. ಇಲ್ಲ ಅಂದ್ರೆ ಸಾಯಿಸಲು ಪರ್ಮಿಷನ್ ಕೊಡಿ. ವಿಷ ಹಾಕಿ ನಾನೇ ಸಾಯಿಸುತ್ತೇನೆ ಎಂದು, ತಾಯಿಯೇ ಪೊಲೀಸರ ಬಳಿ ಕೇಳಿಕೊಂಡಿದ್ದಾರೆ.

ಮಾದಕ ವ್ಯಸನಿಯಾದ ಮಗನನ್ನು ಸಾಯಿಸಲು ತಾಯಿಯೇ ಪೊಲೀಸರ ಬಳಿ ಅನುಮತಿ ಕೇಳಿರುವ ಘಟನೆ, ತುಮಕೂರು ಜಿಲ್ಲೆ ತುರುವೇಕೆರೆಯಲ್ಲಿ ನಡೆದಿದೆ. ಮಗನನ್ನು ಜೈಲಿಗೆ ಹಾಕಿ. ಇಲ್ಲ ಅಂದ್ರೆ ಸಾಯಿಸಲು ಪರ್ಮಿಷನ್ ಕೊಡಿ. ವಿಷ ಹಾಕಿ ನಾನೇ ಸಾಯಿಸುತ್ತೇನೆ ಎಂದು ಮನವಿ ಮಾಡಿದ್ದಾರೆ. 

ನನ್ನ ಮಗ ಸರಿ ಇಲ್ಲ. ಗಾಂಜಾ, ಡ್ರಗ್ಸ್ ಎಲ್ಲಾ ತಗೋತಾನೆ. ದುಡ್ಡಿಲ್ಲದೇ ಸಿಕ್ಕಸಿಕ್ಕವರ ಜೊತೆ ಜಗಳ ಹೊಡೆದಾಟ ಮಾಡ್ತಾನೆ. ಜನರ ಹತ್ತಿರ ಒದೆ ತಿಂದು ಬರ್ತಾನೆ, ಕೈಕಾಲು ಮುರಿದು ಹಾಕ್ತಾರೆ. ನಮ್ಮ ಮರ್ಯಾದೆ ಹೋಗ್ತಾ ಇದೆ ದಯಮಾಡಿ ಇವನನ್ನು ಜೈಲಿಗೆ ಹಾಕಿ ಎಂದು ರೇಣುಕಮ್ಮ ಎಂಬಾಕೆ ಮನವಿ ಮಾಡಿಕೊಂಡಿದ್ದಾರೆ.