ಕರ್ನಾಟಕ

ಚಲಿಸುತ್ತಿದ್ದ ಕಾರಿಗೆ ಬೆಂಕಿ..ಅದೃಷ್ಟವಶಾತ್ ಚಾಲಕ ಬಚಾವ್..!

ಚಲಿಸುತ್ತಿದ್ದ ಕಾರಿಗೆ ಏಕಾಏಕಿ ಬೆಂಕಿ ತಗುಲಿ ಹೊತ್ತಿ ಉರಿದಿರುವ ಘಟನೆ, ಮಂಡ್ಯದ ಎಪಿಎಂಸಿ ಕಚೇರಿ ಮುಂದೆ ನಡೆದಿದೆ.

ಚಲಿಸುತ್ತಿದ್ದ ಕಾರಿಗೆ ಏಕಾಏಕಿ ಬೆಂಕಿ ತಗುಲಿ ಹೊತ್ತಿ ಉರಿದಿರುವ ಘಟನೆ, ಮಂಡ್ಯದ ಎಪಿಎಂಸಿ ಕಚೇರಿ ಮುಂದೆ ನಡೆದಿದೆ. ಬೆಂಗಳೂರು-ಮೈಸೂರು ಹಳೆಯ ಹೆದ್ದಾರಿ ಮುಖಾಂತರ ಕೆಂಗೇರಿಯಿಂದ, ಕುಶಾಲನಗರ ಕಡೆಗೆ ಹೊರಟಿದ್ದ ಕಾರು ಬೆಂಕಿಗಾಹುತಿಯಾಗಿದೆ. ಬೆಂಕಿ ಕಾಣಿಸಿಕೊಂಡದ್ದನ್ನು ಕಂಡು ತಕ್ಷಣ ಕಾರು ನಿಲ್ಲಿಸಿದ, ಮಾಲೀಕ ಮದನ್ ಗಾಬರಿಯಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದೆ. ಅದೃಷ್ಟವಶಾತ್ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.