ತಿರುವನಂತಪುರ: ಪ್ರಿಯತಮೆ ಸೇರಿ ಯುವಕನೋರ್ವ ಒಂದೇ ಕುಟುಂಬದ 5 ಮಂದಿಯನ್ನ ಹತ್ಯೆಗೈದಿದ್ದಾನೆ. ಕೇರಳದ ತಿರುವನಂತಪುರದ ವೆಂಜರಮೂಡು ಎಂಬಲ್ಲಿ ಅಫಾನ್ (23) ಎಂಬಾತ ತಾಯಿ, ಗೆಳತಿ, ಸಹೋದರ, ಅಜ್ಜಿ, ಚಿಕ್ಕಪ್ಪ ಮತ್ತು ಚಿಕ್ಕಮ್ಮಗೆ ಚಾಕು ಮತ್ತು ಸುತ್ತಿಗೆಯಿಂದ ಹೊಡೆದು ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಕೊಲೆಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಅಫಾನ್ ವಿಷ ಸೇವಿಸಿ ಪೊಲೀಸರಿಗೆ ಶರಣಾಗಿದ್ದು, ಪೊಲೀಸರೆದುರು ತಾನು ತಾಯಿ, ಗೆಳತಿ ಸೇರಿದಂತೆ ಆರು ಜನರನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಆರೋಪಿ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಆರೋಪಿಯ ತಾಯಿ ಅಸ್ವಸ್ಥರಾಗಿ ಬಿದ್ದಿದ್ದರು. ಅವರನ್ನೂ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ. ಮೂವರನ್ನು ಬೇರೆ ಬೇರೆ ಸ್ಥಳಗಳಲ್ಲಿ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಹತ್ಯೆಯಾದವರು:
ಅಹಸನ್ (13) : ಆರೋಪಿಯ ಸಹೋದರ
ಸಲ್ಮಾ ಬೀವಿ: ಆರೋಪಿಯ ಅಜ್ಜಿ
ಲತೀಫ್ : ಆರೋಪಿಯ ಸ್ವಂತ ಚಿಕ್ಕಪ್ಪ
ಶಾಹಿಹಾ : ಆರೋಪಿಯ ಚಿಕ್ಕಮ್ಮ
ಫರ್ಶಾನಾ : ಆರೋಪಿಯ ಪ್ರಿಯತಮೆ
ಪೊಲೀಸರು ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಕ್ರೂರ ಹತ್ಯೆಗಳಿಗೆ ಕಾರಣಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.