ವೈರಲ್

ತುಮಕೂರಿನಲ್ಲಿ "ತೆಂಕಣ ಜಯಮಂಗಲಿ" ಹೊಸ ಪ್ರಭೇದದ ಜೇಡ ಪತ್ತೆ

ಕಳೆದ ಒಂದೂವರೆ ವರ್ಷದ ಹಿಂದೆ ಪ್ರಾರಂಭವಾದ ಸಂಶೋಧನೆ ವೇಳೆ ಹೊಸ ಪ್ರಭೇದದ ಜೇಡ ಪತ್ತೆಯಾಗಿತ್ತು. ತುಮಕೂರು ಜಿಲ್ಲೆಯ ದೇವರಾಯನದುರ್ಗದ ಬಳಿಯ ಜಯಮಂಗಲಿ ನದಿ ಉಗಮ ಸ್ಥಾನದ ಬಳಿ ಈ ಜೇಡ ಪತ್ತೆಯಾಗಿದೆ.

ತುಮಕೂರು : ಜಯಮಂಗಲಿ ನದಿ ತೀರದಲ್ಲಿ ಹೊಸ ಪ್ರಭೇಧದ ಜೇಡ ಪತ್ತೆಯಾಗಿದೆ. ಕಳೆದ ಒಂದೂವರೆ ವರ್ಷದ ಹಿಂದೆ ಪ್ರಾರಂಭವಾದ ಸಂಶೋಧನೆ ವೇಳೆ ಹೊಸ ಪ್ರಭೇದದ ಜೇಡ ಪತ್ತೆಯಾಗಿತ್ತು.  ತುಮಕೂರು ಜಿಲ್ಲೆಯ ದೇವರಾಯನದುರ್ಗದ ಬಳಿಯ ಜಯಮಂಗಲಿ ನದಿ ಉಗಮ ಸ್ಥಾನದ ಬಳಿ ಈ ಜೇಡ ಪತ್ತೆಯಾಗಿದೆ.

ಮೊದಲಿಗೆ 2023ರ ಏಪ್ರಿಲ್ ತಿಂಗಳಿನಲ್ಲಿ ವೈಲ್ಡ್ ಲೈಫ್ ಅವರ್ನೇಸ್ ನೇಚರ್ ತಂಡ ಪತ್ತೆ ಹಚ್ಚಿತ್ತು. ಸಂಶೋದಕರು ಜೇಡಕ್ಕೆ ಸ್ಥಳಿಯ ಹೇಸರೆ ನಾಮಕರಣ ಮಾಡಿದ್ದಾರೆ. "ತೆಂಕಣ ಜಯಮಂಗಲಿ" ಜೇಡ ಎಂಬ ಹೆಸರಿಟ್ಟಿದ್ದಾರೆ. ಪ್ರಭೇದವಷ್ಟೇ ಅಲ್ಲದೆ ಇದರ ಜೀನಸ್ ಕೂಡ ವಿಜ್ಞಾನ ಲೋಕಕ್ಕೆ ಹೊಸದು ಎಂದು ತಿಳಿಸಿದ್ದಾರೆ.

ವರ್ಲ್ಡ್ ವೈಡ್ ವೆಂಚರ್ ಮುಖ್ಯಸ್ಥರು ಲೋಹಿತ್ ಅವರು ಮಾತನಾಡಿದ್ದು, ದೇವರಾಯನ ದುರ್ಗ ಕೇವಲ ಪುಣ್ಯ ಕ್ಷೇತ್ರವಷ್ಟೆ ಅಲ್ಲದೆ ಜೀವವೈವಿದ್ಯತೆಯ ತಾಣ ಎನ್ನುತ್ತಾರೆ. ಬೆಂಗಳೂರಿನ ರಾಷ್ಟ್ರೀಯ ಜೈವಿಕ ವಿಜ್ಲಾನ ಕೇಂದ್ರ ಮತ್ತು ಯೂನಿವರ್ಸಿಟಿ ಆಫ್ ಬ್ರಿಟಿಷ್ ಕೊಲಂಬಿಯಾ ಲ್ಯಾಬ್ ನ ಸಹಯೊಗದೊಂದಿಗೆ ಹೊಸ ಪ್ರಭೇದ ಗುರುತಿಸುವಿಕೆ ಕಾರ್ಯ ನಡೆದಿದೆ.