ಕರ್ನಾಟಕ

ಮನೆಗಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ ಕುಖ್ಯಾತ ಕಳ್ಳ ಅರೆಸ್ಟ್‌..

ಅನ್ನಪೂರ್ಣೇಶ್ವರಿ ನಗರ ಪೊಲೀಸರ ಕಾರ್ಯಾಚರಣೆ ನಡೆಸಿ ಮನೆಗಳ್ಳತವನ್ನೇ ವೃತ್ತಿ ಮಾಡಿಕೊಂಡಿದ್ದ ಕುಖ್ಯಾತ ಕಳ್ಳನನ್ನ ಬಂಧಿಸಿದ್ದಾರೆ.

ಬೆಂಗಳೂರು : ಅನ್ನಪೂರ್ಣೇಶ್ವರಿ ನಗರ ಪೊಲೀಸರ ಕಾರ್ಯಾಚರಣೆ ನಡೆಸಿ ಮನೆಗಳ್ಳತವನ್ನೇ ವೃತ್ತಿ ಮಾಡಿಕೊಂಡಿದ್ದ ಕುಖ್ಯಾತ ಕಳ್ಳನನ್ನ ಬಂಧಿಸಿದ್ದಾರೆ. 

ಉತ್ತರ ಪ್ರದೇಶದ ಮೋರದಾಬಾದ್ ಜಿಲ್ಲೆಯ @ ಎಟಿಎಂ ಫಹೀಮ್ ಬಂಧಿತ ಆರೋಪಿಯಾಗಿದ್ದು, ಕಾರಿನಲ್ಲಿ ಫುಲ್ ಸ್ಟಾಂಡರ್ಡ್ ಆಗಿ ಬರುತ್ತಿದ್ದ. ಬೆಳಗ್ಗೆ ಪೋಷಕರು ಮಕ್ಕಳನ್ನು ಶಾಲೆಗೆ ಬಿಡಲು ಹೋದಾಗ ಹೊಂಚು ಹಾಕಿ ಕಾಯುತ್ತಿದ್ದ. ಮನೆಯವರು ಹೊರಹೋದ ತಕ್ಷಣ ಅರ್ಧ ಗಂಟೆಯಲ್ಲೇ ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದನು. 

ಕಳೆದ ವರ್ಷ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದನು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು. ಈ ವರ್ಷ ಏಪ್ರಿಲ್ ನಲ್ಲಿ ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಕಳ್ಳತನ ಮಾಡಿ ಮಹಾರಾಷ್ಟ್ರ, ಉತ್ತರ ಪ್ರದೇಶ, ಹರಿಯಾಣ, ದೆಹಲಿಯಲ್ಲಿ ಕದ್ದ ಚಿನ್ನ ಮಾರಾಟ ಮಾಡಿದ್ದನು.

ಕಾರ್ಯಾಚರಣೆಯನ್ನ ಚುರುಕುಗೊಳಿಸಿದ ಪೊಲೀಸರು ಉತ್ತರ ಪ್ರದೇಶದಲ್ಲಿ ಆರೋಪಿ ಫಹೀಮ್ ನನ್ನ ಬಂಧಿಸಿದ್ದಾರೆ. ಬಂಧಿತನಿಂದ 1.25 ಕೋಟಿ ಮೌಲ್ಯದ 1ಕೆ.ಜಿ 700 ಗ್ರಾಂ ಚಿನ್ನ ವಶಕ್ಕೆ ಪಡೆದಿದ್ದಾರೆ.  ಇನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.