ದೇಶ

ಒಡಿಶಾದ ನಯಾಗಢದಲ್ಲಿ ಮರಿಯೊಂದಿಗೆ ಕಾಣಿಸಿಕೊಂಡ ಅಪರೂಪದ ಮೆಲನಿಸ್ಟಿಕ್ ಚಿರತೆ.!

ಮೆಲನಿಸ್ಟಿಕ್ ಚಿರತೆ ಕಾಣಿಸಿಕೊಳ್ಳುತ್ತಿದ್ದಂತೆ ವನ್ಯಜೀವಿ ಪ್ರಿಯರಲ್ಲಿ ಹುರುಪು ಮೂಡಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭುವನೇಶ್ವರ: ಒಡಿಶಾದ ನಯಾಗಢ್ ಜಿಲ್ಲೆಯ ಕಾಡಿನಲ್ಲಿ ಅಪರೂಪದ ಮೆಲನಿಸ್ಟಿಕ್ ಚಿರತೆ ಮರಿಯೊಂದಿಗೆ ಕಾಣಿಸಿಕೊಂಡಿದೆ.  ಮೆಲನಿಸ್ಟಿಕ್ ಚಿರತೆ ಕಾಣಿಸಿಕೊಳ್ಳುತ್ತಿದ್ದಂತೆ ವನ್ಯಜೀವಿ ಪ್ರಿಯರಲ್ಲಿ ಹುರುಪು ಮೂಡಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾಡಿನಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾ ಟ್ರ್ಯಾಪ್ ಸಹಾಯದಿಂದ ಚಿರತೆಯ ದೃಶ್ಯಗಳನ್ನ ಸೆರೆಹಿಡಿಯಲಾಗಿದೆ.

'ಕಪ್ಪು ಪ್ಯಾಂಥರ್'ಗಳು ಉತ್ತಮ ಜೀವವೈವಿದ್ಯತೆಯನ್ನ ಪ್ರತಿನಿಧಿಸುತ್ತಿದ್ದು, ಅಭಿವೃದ್ಧಿ ಹೊಂದುತ್ತಿರುವ ವನ್ಯಜೀವಿ ಪರಂಪರೆಯನ್ನು ಖಾತ್ರಿಪಡಿಸುತ್ತದೆ. ಇನ್ನೂ ಅರಣ್ಯಗಳ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ (ವೈಲ್ಡ್ ) ಪ್ರೇಮ್ ಕುಮಾರ್ ಝಾ ಅವರು X ಖಾತೆಯಲ್ಲಿ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.