ಬೆಂಗಳೂರು: ನಟ ಭಯಂಕರ ಡಾಲಿ ಧನಂಜಯ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಮೈಸೂರಿನ ಅಂಬಾ ವಿಲಾಸ ಅರಮನೆ ಆವರಣ ಡಾಲಿ ಮದುವೆಗೆ ಸಜ್ಜಾಗುತ್ತಿದೆ. ಈಗಾಗಲೇ ಧನಂಜಯ್ ತಮ್ಮ ಮದುವೆ ಆಮಂತ್ರಣವನ್ನ ಅಭಿಮಾನಿಗಳಿಗೆ, ಚಲಚಿತ್ರ ನಟರಿಗೆ, ರಾಜಕೀಯ ಗಣ್ಯರಿಗೆ ನೀಡಿದ್ದಾರೆ. ಆದರೆ ಹಸೆಮಣೆ ಏರಲು ಸಜ್ಜಾಗಿರುವ ಡಾಲಿಗೊಂದು ವಿಶೇಷ ಉಡುಗೊರೆ ಸಿಕ್ಕಿದೆ.
ಹೌದು, ಹೊಸಬಾಳಿಗೆ ಕಾಲಿಡುತ್ತಿರುವ ಧನಂಜಯ್ ಅವರಿಗೆ ಮೈಸೂರು ಅಂಚೆ ಇಲಾಖೆಯೊಂದು ಮರೆಯಲಾಗದ ಉಡುಗೊರೆ ನೀಡಿದೆ. ಧನಂಜಯ್ ಮದುವೆ ಆಮಂತ್ರಣ ಪತ್ರಿಕೆ ಮೆಚ್ಚಿ ಧನಂಜಯ್-ಧನ್ಯತಾ ದಂಪತಿಗೆ ಅಂಚೆ ಇಲಾಖೆ ವಿಶೇಷ ಉಡುಗೊರೆ ನೀಡಿದೆ.. ಡಾಲಿ ಧನಂಜಯ್ ಸ್ವತಃ ತಮ್ಮ ಕೈ ಬರವಣಿಗೆಯಲ್ಲಿ ಆಹ್ವಾನ ಪತ್ರಿಕೆ ಬರೆದು ಅದನ್ನು ಮುದ್ರಿಸಿ ಹಂಚಿದ್ದರು. ಇದೀಗ ಧನಂಜಯ್ ಮದುವೆ ಆಮಂತ್ರಣ ಪತ್ರಿಕೆ ಮೆಚ್ಚಿ ಧನಂಜಯ್-ಧನ್ಯತಾಗೆ ಅಂಚೆ ಇಲಾಖೆ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ.
ಧನಂಜಯ್-ಧನ್ಯತಾ ಮದುವೆಗೆ ವಿಶೇಷ ಸ್ಟ್ಯಾಂಪ್ ನೀಡಿ ಶುಭಾಶಯ ತಿಳಿಸಿದೆ. ಶುಭ ವಿವಾಹ ಎಂಬ ಮುದ್ರಣದೊಂದಿಗೆ ವಿಶೇಷವಾಗಿರುವ 12 ಸ್ಟ್ಯಾಂಪ್ ಗಳನ್ನ ಉಡುಗೊರೆಯಾಗಿ ನೀಡಿದೆ. ಮೈಸೂರು ಅಂಚೆ ವಿಭಾಗದ ಅಧಿಕಾರಿಗಳು ಧನಂಜಯ್ ಅವರನ್ನು ಭೇಟಿಯಾಗಿ ಗಿಫ್ಟ್ ನೀಡಿದ್ದಾರೆ.
ವಿಶೇಷ ಸ್ಟ್ಯಾಂಪ್ ನಲ್ಲಿ ಧನಂಜಯ್ ಹಾಗೂ ಧನ್ಯತಾ ಅವರ ಫೋಟೋಗಳನ್ನು ಬಳಸಲಾಗಿದೆ. ಇನ್ ಲ್ಯಾಂಡ್ ಲೆಟರ್ ಮಾದರಿಯ ಆಮಂತ್ರಣದ ಪತ್ರಿಕೆ ಹಲವರಿಗೆ ಮಾದರಿಯಾಗಿದೆ. ನಿಮ್ಮ ನಡೆಯಿಂದ ಮತ್ತೆ ಇನ್ ಲ್ಯಾಂಡ್ ಲೆಟರ್ ಗಳಿಗೆ ಬೇಡಿಕೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಲ್ಲದೆ ನಿಮ್ಮ ನಡೆಯಿಂದ ಮತ್ತೆ ಇನ್ ಲ್ಯಾಂಡ್ ಲೇಟರ್‌ಗಳಿಗೆ ಬೇಡಿಕೆ ಬಂದಿದೆ. ಜನರು ಮತ್ತೆ ಅಂಚೆ ಕಚೇರಿಯಲ್ಲಿ ಇನ್ ಲ್ಯಾಂಡ್ ಲೇಟರ್ ಕೇಳಿ ಪಡೆಯುತ್ತಿದ್ದಾರೆ. ಮದುವೆಯ ಮೂಲಕ ಮಾದರಿಯಾದ ನಿಮಗೆ ಅಭಿನಂದನೆಗಳು ಎಂದು ಅಂಚೆ ಇಲಾಖೆ ಅಧಿಕಾರಿಗಳು ಡಾಲಿ ಧನಂಜಯ ಅವರಿಗೆ ಶುಭಕೋರಿದ್ದಾರೆ.
ನಟ ಡಾಲಿ ಧನಂಜಯ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಫೋಟೋವನ್ನು ಹಂಚಿಕೊಂಡಿದ್ದು, ಅಂಚೆ ಇಲಾಖೆಗೆ ಧನ್ಯವಾದ ಹೇಳಿದ್ರು. ನಿಮ್ಮ ಪ್ರೀತಿಗೆ ಶರಣು, ಧನ್ಯವಾದಗಳು ಎಂದು ಬರೆದಿದ್ದಾರೆ.