ವೈರಲ್

ಒಡೆ ಮಾದೇಶ್ವರನಿಗೆ ವಿಶೇಷ ನೈವೇಧ್ಯ; ಮದ್ಯದ ನಶೆಯಲ್ಲಿ ವಿಚಿತ್ರ ಆರಾಧನೆ

ಇನ್ನೂ ಮದ್ಯ ತಂದು ದೇವರಿಗೆ ಭಕ್ತರು ನೈವೇಧ್ಯ ಮಾಡಿ ಬಳಿಕ ಎಲ್ಲಾ ಮದ್ಯವನ್ನು ಡ್ರಮ್‌ ಒಂದರಲ್ಲಿ ಸಂಗ್ರಹಿಸಿ ತೀರ್ಥದ ರೂಪದಲ್ಲಿ ಭಕ್ತರಿಗೆ ಹಂಚಲಾಗಿದೆ. ಮದ್ಯದ ತೀರ್ಥ ಕುಡಿದು ಮತ್ತೇರಿಸಿಕೊಂಡ ಭಕ್ತ ವೃಂದ ಕುಡಿದ ನಶೆಯಲ್ಲಿ ಕುಣಿದು ಕುಟ್ಟಳಿಸಿದ್ದಾರೆ.

ತುಮಕೂರು : ದೇವರಿಗೆ ಹಾಲು, ಮೊಸರು, ತುಪ್ಪ ಇತ್ಯಾದಿಗಳ ನೈವೇಧ್ಯವನ್ನ ನೋಡಿರ್ತೀವಿ. ಆದ್ರೆ ಇಲ್ಲೊಂದು ದೇವಸ್ಥಾನದಲ್ಲಿ ದೇವಸ್ಥಾನದಲ್ಲಿ ಡಿಫರೆಂಟ್‌ ನೈವೇಧ್ಯ ಮಾಡಲಾಗುತ್ತದೆ. ಹೌದು, ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗದ ಓಡೇ ಭೈರವೇಶ್ವರ ದೇವಸ್ಥಾನದಲ್ಲಿ ವಿಚಿತ್ರ ಆರಾಧನೆ ಮಾಡಲಾಗುತ್ತದೆ. ಒಡೆ ಭೈರೇಶ್ವರನಿಗೆ ಪ್ರಿಯವಾದ ಮದ್ಯವನ್ನ ತಂದು ನೈವೇಧ್ಯ ಮಾಡಲಾಗುತ್ತದೆ. 