ಹಾನಗಲ್ಲ: ತನ್ನ ಪತ್ನಿಯನ್ನ ತವರು ಮನೆಯಿಂದ ವಾಪಸ್ ಕಳುಹಿಸಿಲ್ಲ ಎಂದು ಕುಪಿತಕೊಂಡ ಅಳಿಯ ಮಾವನ ಅಡಿಕೆ ತೋಟವನ್ನೇ ನಾಶ ಪಡಿಸಿದ ಅಮಾನವೀಯ ಘಟನೆ ಹಾನಗಲ್ಲ ತಾಲೂಕಿನ ಬಸಾಪುರದಲ್ಲಿ ನಡೆದಿದೆ.
ತೋಟದ ಮಾಲಿಕರಾದ ದೇವೇಂದ್ರಪ್ಪ ಗಾಣಿಗೇರ ಅವರು ಆಡೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿದ್ದಾರೆ. ತಮ್ಮ ಅಳಿಯ ಬಸವರಾಜ ತನ್ನ ಹೊಲದಲ್ಲಿನ 2 ವರ್ಷದ ಅಡಕೆ ಗಿಡಗಳನ್ನು ಕಡಿದು ಹಾಕಿರುವುದಾಗಿ ಆರೋಪಿಸಿದ್ದಾರೆ.
ಸೊರಬ ತಾಲೂಕಿನ ಬೈದವಟ್ಟಿ ಗ್ರಾಮದ ಬಸವರಾಜ ಈ ಪ್ರಕರಣದ ಆರೋಪಿ. ಬಸವರಾಜ್ 10 ವರ್ಷ ಹಿಂದೆ ದೇವೇಂದ್ರಪ್ಪರ ಮಗಳ ಜತೆ ವಿವಾಹವಾಗಿದ್ದರು. ಆದರೆ ಗಂಡನ ಕಿರುಕುಳ ತಾಳಲಾರದೇ ಇತನ ಪತ್ನಿ 3 ತಿಂಗಳ ಹಿಂದೆ ತವರು ಮನೆ ಸೇರಿದ್ದರು.
ಪತ್ನಿಯನ್ನು ತನ್ನ ಜೊತೆಗೆ ಕಳುಹಿಸುವಂತೆ ಬಸವರಾಜ ಪರಿಪರಿಯಾಗಿ ಕೇಳಿಕೊಂಡರೂ ಮಾವ ಕಳುಹಿಸಿಲ್ಲ ಎನ್ನಲಾಗಿದೆ. ಈ ಕಾರಣದಿಂದ ಕೋಪಗೊಂಡ ಬಸವರಾಜ ಅಡಕೆ ಮರಗಳನ್ನು ಕಡಿದು ಹಾಕಿದ್ದಾನೆ ಎಂದು ದೂರಲಾಗಿದೆ.