ಕರ್ನಾಟಕ

ಗಲಾಟೆ ನಡೆದಿದ್ದು ಸ್ನೇಹಿತರ ನಡುವೆ...ಚಾಕು ಇರಿದಿದ್ದು ಟೀ ಅಂಗಡಿ ಮಾಲೀಕನಿಗೆ.

ಸ್ನೇಹಿತರಿಬ್ಬರ ನಡುವಿನ ಗಲಾಟೆಯಿಂದ ಟೀ ಅಂಗಡಿ ಮಾಲೀಕಬನೊಬ್ಬ ಆಸ್ಪತ್ರೆ ಸೇರುವಂತಾಗಿದೆ.

ಸ್ನೇಹಿತರಿಬ್ಬರ ನಡುವಿನ ಗಲಾಟೆಯಿಂದ ಟೀ ಅಂಗಡಿ ಮಾಲೀಕಬನೊಬ್ಬ ಆಸ್ಪತ್ರೆ ಸೇರುವಂತಾಗಿದೆ. ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಟೀ ಅಂಗಡಿ ಮುಂದೆ ಗಲಾಟೆ ಮಾಡುತ್ತಿದ್ದ ಸ್ನೇಹಿತರಿಗೆ, ಇಲ್ಲಿ ಗಲಾಟೆ ಮಾಡಬೇಡಿ ಎಂದಿದ್ದಕ್ಕೆ ಚಾಕು ಇರಿದಿರುವ ಘಟನೆ ನಡೆದಿದೆ. ಚಾಕು ಇರಿತಕ್ಕೊಳಗಾದ ವ್ಯಕ್ತಿ ಮೈಸೂರಿನ ಕೆ.ಆಸ್ಪತ್ರೆಗೆ ದಾಖಲಾಗಿದ್ದು, ಇಬ್ಬರ ವಿರುದಧ ನಂಜನಗೂಡು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಶಂಕರಪುರ ಗ್ರಾಮದ ಯೋಗಿ, ಹರ್ಷಿತ್‌ ಕಿರಣ್‌  ಮೇಲೆ ಪ್ರಕರಣ ದಾಖಲಾಗಿದೆ. ಟೀ ಅಂಗಡಿ ಮುಂದೆ ಬಂದ ಯೋಗಿ ಹಾಗೂ ಇತರರು ಟೀ ಅಂಗಡಿ ಮುಂದೆ, ಕ್ಷುಲ್ಲಕ ಕಾರಣಕ್ಕೆ ಗಲಾಟೆ ತೆಗೆದರು. ಈ ವೇಳೆ ಅಂಗಡಿ ಮುಂದೆ ಗಲಾಟೆ ಮಾಡಿದರೆ ವ್ಯಾಪಾರಕ್ಕೆ ತೊಂದರೆಯಾಗುತ್ತದೆ ಎಂದ ಅಂಗಡಿ ಮಾಲೀಕ ಗಿರೀಶ್‌ ಮೇಲೆ ಅಟ್ಟಹಾಸ ಮೆರೆದಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಿರಿಕ್‌ ಮಾಡುತ್ತಾ ಎಳೆದಾಡಿ, ನೂಕಾಡುತ್ತಾ ಗಲಾಟೆ ಮಾಡಿದ್ದಾರೆ. ಈ ವೇಳೆ ಹರ್ಷಿತ್‌, ಕಿರಣ್‌ ಹಾಗೂ ಇತರರೊಡನೆ ಬಂದ ಯೋಗಿ, ಚಾಕುವಿನಿಂದ ತಲೆಗೆ ಇರಿದಿದ್ದಾನೆ. ಈ ಸಂಬಂಧ ಯೋಗಿ, ಹರ್ಷಿತ್ ಕಿರಣ್ ಹಾಗೂ ಇತರರ ಮೇಲೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.