ಮೈಸೂರು : ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಂಜನಗೂಡು-ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿಯ ಹಿರೀಕಾಟಿಯಲ್ಲಿ ದುರ್ಘಟನೆ ಸಂಭವಿಸಿದ್ದು, ನಂಜನಗೂಡಿ ತಾಲ್ಲೂಕಿನ ಕುಡ್ಲಾಪುರ ಗ್ರಾಮದ ಶಶಿಧರ್ (40), ಶಾಲಿನಿ(35), ತಾಯಿ ಭಾಗ್ಯಮ್ಮ(55) ಮೃತಪಟ್ಟಿದ್ದಾರೆ.
ಚಿಕ್ಕದೇವಮ್ಮನ ಬೆಟ್ಟದಿಂದ ಪೂಜಾ ಕಾರ್ಯಕ್ರಮ ಮುಗಿಸಿ ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಬೇಗೂರು ಪೊಲೀಸರು ಭೇಟಿ ನೀಡಿ ಪಡಿಶೀಲನೆ ನಡೆಸಿದ್ದಾರೆ.