ಉತ್ತರ ಪ್ರದೇಶದ ಫತೇಪುರದ ಪಂಬಿಪುರ ಬಳಿ ನಿಂತಿದ್ದ ಗೂಡ್ಸ್ ರೈಲಿಗೆ ಹಿಂದಿನಿಂದ ಮತ್ತೊಂದು ಗೂಡ್ಸ್ ಟ್ರೈನ್ ಡಿಕ್ಕಿ ಹೊಡೆದಿದೆ. ಅವಘಡದಲ್ಲಿ ಗಾರ್ಡ್ ಕೋಚ್ ಮತ್ತು ಎಂಜಿನ್ ಹಳಿ ತಪ್ಪಿದೆ. ಅಪಘಾತದಿಂದಾಗಿ ಫತೇಂಪುರ ರೈಲು ಮಾರ್ಗದಲ್ಲಿ ಟ್ರೈನ್‌ಗಳ ಓಡಾಟದಲ್ಲಿ ವಿಳಂಬವಾಗಿದೆ. 2 ರೈಲುಗಳ ಅಪಘಾತದಲ್ಲಿ ಚಾಲಕ ಸೇರಿದಂತೆ ಇಬ್ಬರು ರೈಲ್ವೆ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಟ್ರೈನ್ ಆಕ್ಸಿಡೆಂಟ್‌ಗೆ ಕಾರಣ ಏನು ಅಂತಾ ರೈಲ್ವೆ ಹಿರಿಯ ಅಧಿಕಾರಿಗಳು ತನಿಖೆಗೆ ಸೂಚಿಸಿದ್ದಾರೆ.