ಮೈಸೂರು - ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆಯಲ್ಲಿ ಗೋಲ್ಮಾಲ್ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗಾಗಿ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಸಿಎಂ ಸಿದ್ದರಾಮಯ್ಯ ಮೂಡ ಹಗರಣದಿಂದ ಮುಕ್ತಿ ಹೊಂದಲಿ ಎಂದು ಅಭಿಮಾನಿಗಳು ದೇವರನ್ನ ಬೇಡಿಕೊಂಡಿದ್ಧಾರೆ.
ಈ ಅಂಗವಾಗಿ ಮೈಸೂರಿನ ಚಾಮುಂಡೇಶ್ವರಿ ಬೆಟ್ಟವನ್ನ ಬರಿಗಾಲಿನಲ್ಲಿ ಅಭಿಮಾನಿಗಳನ್ನ ಹತ್ತಿದರು. ಜತೆಗೆ 101 ಈಡುಗಾಯಿ ಹೊಡೆದು ಹರಕೆ ಹೊತ್ತಿಕೊಂಡರು. ಕೂಡಲೇ ಸಿಎಂ ಸಿದ್ದರಾಮಯ್ಯ ಆರೋಪಗಳಿಂದ ಮುಕ್ತಿ ಪಡೆಯಲಿ ಎಂದು ಪ್ರಾರ್ಥಿಸಿದರು.