ಮದುವೆಗೆ ನಿರಾಕರಿಸಿದ ಪ್ರೇಯಸಿ ವಿರುದ್ಧ ಸಿಡಿದೆದ್ದ ಪ್ರಿಯತಮ, ಆಕೆಯ ಕೊಲೆಗೆ ಯತ್ನಿಸಿರುವ ಘಟನೆ ಹಾಸನ ಜಿಲ್ಲೆ ಆಲೂರು ಪಟ್ಟಣದಲ್ಲಿ ನಡೆದಿದೆ. ಡ್ರಿಂಕ್ಸ್ ಮಾಡಿದ್ದ ಯುವಕ ತನ್ನ ಪ್ರೇಯಸಿ ಇರುವ ಜಾಗಕ್ಕೆ ತೆರಳಿ, ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿ ಗಂಭೀರ ಗಾಯಗೊಳಿಸಿದ್ದಾನೆ.
ಎರಡು ವರ್ಷಗಳಿಂದ ಮೋಹಿತ್ ಹಾಗೂ ಗಾನವಿ ಎಂಬ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಕೆಲ ದಿನಗಳಿಂದ ಮೋಹಿತ್ ನಿಂದ ಗಾನವಿ ದೂರವಾಗಿದ್ದಳು. ಪ್ರೇಯಸಿಯನ್ನು ಮದುವೆಯಾಗುವಂತೆ ಬೆನ್ನು ಬಿದ್ದಿದ್ದ ಮೋಹಿತ್, ಗಾನವಿಗೆ ತುಂಬಾನೆ ಕಾಟ ಕೊಡುತ್ತಿದ್ದ. ಇದರಿಂದ ಬೇಸತ್ತ ಗಾನವಿ ತನ್ನ ಕುಟುಂಬಸ್ಥರಿಗೆ ಮಾಹಿತಿ ತೀಡಿದ್ದಳು. ಆಗ ರಾಜಿ ಸಂಧಾನ ನಡೆಸಿದ ಇಬ್ಬರ ಕುಟುಂಬಗಳೂ, ಯಾರೂ ಯಾರ ತಂಟೆಗೂ ಬರಬಾರದು ಎಂದು ಮಾತುಕತೆ ನಡೆಸಿದ್ದರು. ಇದರ ಬಗ್ಗೆ ಗ್ರಾಮಸ್ಥರ ಜೊತೆಗೆ ನೋಟರಿ ಬರೆಸಲು ಬಂದಿದ್ದಾಗ, ಪಟ್ಟಣ ಪಂಚಾಯತಿ ಮುಂಭಾಗ ನಿಂತಿದ್ದ ಗಾನವಿಯನ್ನು ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿದ್ದಾನೆ. ಇದರಿಂದ ಗಾನವಿ ಕೈಗಳಿಗೆ ಹಾಗೂ ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಗಾಯಾಳುಗೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ.