ಫೋನ್‌ನಲ್ಲಿ ಮಾತನಾಡುತ್ತಾ ಹೋಗ್ತಿದ್ದ ಯುವತಿಯನ್ನ ಸ್ಕೂಟರ್‌ನಲ್ಲಿದ್ದ ಕಿಡಿಗೇಡಿ ಧರಧರನೇ ಎಳೆದೊಯ್ದಿರುವ ಘಟನೆ ಪಂಜಾಬ್‌ನ ಲುಧಿಯಾನದಲ್ಲಿ ನಡೆದಿದೆ.ಇಲ್ಲಿನ ರೋಸ್‌ಗಾರ್ಡನ್ ಬಳಿ ವ್ಯಕ್ತಿಯೊಬ್ಬ ಯುವತಿಯಿಂದ ಫೋನ್ ಕಸಿದುಕೊಳ್ಳಲು ಬೈಕ್‌ನಲ್ಲಿದ್ದ ಕಿಡಿಗೇಡಿ ಯತ್ನಿಸಿ ಆಕೆಯನ್ನ ಎಳೆದೊಯ್ದಿರುವ ವಿಡಿಯೋ ವೈರಲ್ ಆಗಿದೆ. ದುಷ್ಕರ್ಮಿಯೊಬ್ಬ ಯುವತಿಯ ಮೊಬೈಲ್ ಫೋನ್ ಕಸಿದುಕೊಳ್ಳಲು ಪ್ರಯತ್ನಿಸಿದ್ದಾನೆ. ಆಗ ಆಕೆ ಅಪರಿಚಿತನ ಕೈಹಿಡಿದು ಪ್ರತಿರೋಧಿಸಿದ್ದಾಳೆ. ಆದರೂ ಅವನು ಮೊಬೈಲ್ ಖದೀಯುವ ಯತ್ನದಲ್ಲಿ ಯುವತಿಯನ್ನೇ ಸುಮಾರು 30 ಮೀಟರ್ ವರೆಗೆ ಎಳೆದೊಯ್ದಿದ್ದಾನೆ. ಇಡೀ ಕೃತ್ಯ ಕಂಡು ಸ್ಥಳೀಯರು ಅಡ್ಡ ಬರ್ತಿದ್ದಂತೆ ಬೈಕ್‌ನಲ್ಲಿದ್ದ ಕಿಡಿಗೇಡಿ ಯುವತಿ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಘಟನೆಯಲ್ಲಿ ಗಾಯಗೊಂಡಿದ್ದ ಯುವತಿಯಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಸಿಟಿವಿ ದೃಶ್ಯಗಳ ಮೇಲೆ ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.