ಬಾಲಿವುಡ್ ನಟ ಆಮಿರ್ ಖಾನ್ ಕೂಡ ಉಪೇಂದ್ರಗೆ ಫ್ಯಾನ್ಸ್ ಆಗಿದ್ದಾರೆ. ಈ ಬಗ್ಗೆ ಅವರೇ ಖುದ್ದು ಹೇಳಿಕೊಂಡಿದ್ದಾರೆ. ಉಪೇಂದ್ರ ಮತ್ತು ಆಮಿರ್ ಖಾನ್ ಭೇಟಿ ಆಗಿದ್ದಾರೆ. ಈ ವೇಳೆ ವಿಡಿಯೋ ಮೂಲಕ ಯುಐ ಟ್ರೈಲರ್ ಬಗ್ಗೆ ಆಮೀರ್ ಖಾನ್ ಮಾತನಾಡಿದ್ದು, ಹಿಂದಿ ಆಡಿಯನ್ಸ್ ಕೂಡ ಸಿನಿಮಾ ಇಷ್ಟ ಪಡ್ತಾರೆ ಎಂದಿದ್ದಾರೆ. ‘ಯುಐ’ ಸಿನಿಮಾದ ಟ್ರೇಲರ್ ಕಂಡು ಆಮಿರ್ ಖಾನ್ ಫಿದಾ ಆಗಿದ್ದಾರೆ. ಸದ್ಯ ಆಮೀರ್ ಖಾನ್ ಜೊತೆಗಿನ ವಿಡಿಯೋವನ್ನ ಉಪೇಂದ್ರ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಇನ್ನು ಡಿಸೆಂಬರ್ 20ರಂದು ‘ಯುಐ’ ಸಿನಿಮಾ ಬಿಡುಗಡೆ ಆಗಲಿದೆ. ಈಗಾಗಲೇ ಟ್ರೇಲರ್ ಮತ್ತು ಹಾಡುಗಳ ಮೂಲಕ ಈ ಸಿನಿಮಾ ಸದ್ದು ಮಾಡಿದೆ. ಉಪೇಂದ್ರ ಅವರು ನಿರ್ದೇಶನ ಮಾಡಿರುವುದರಿಂದ ಹೆಚ್ಚಿನ ನಿರೀಕ್ಷೆ ಇದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತೆರೆಕಾಣಲಿದೆ.