ಸ್ಪೆಷಲ್ ಸ್ಟೋರಿ

ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ಕೊಟ್ಟ ಎಬಿ ಡಿವಿಲಿಯರ್ಸ್..!

ಬಿಡಿ ಮತ್ತೆ ಬೆಂಗಳೂರು ಪರ ಆಟವಾಡಲಿ ಅಂತಾ ಬಯಸ್ತಿದ್ದಾರೆ.. ಈ ಹಿಂದೆ ಕಣ್ಣು ದೃಷ್ಟಿ ಸಮಸ್ಯೆಯ ಕಾರಣ ದಿಢೀರ್ ನಿವೃತ್ತಿ ಘೋಷಿಸಿದ್ದ ಎಬಿಡಿ, ನನ್ನ ಎಡಗಣ್ಣು ಸ್ವಲ್ಪ ಮಸುಕಾಗಿದ್ದರೂ,. ಈಗ ಬಲಗಣ್ಣು ಪ್ರಬಲವಾಗಿದೆ.

ಐಪಿಎಲ್‌ ಅಂದ್ರೆ ಥಟ್‌ ಅಂತಾ ನೆನಪಾಗೋದು ಆರ್‌ಸಿಬಿ ಅಂದ್ರೆ ತಪ್ಪಾಗಲ್ಲ. ಬೆಂಗಳೂರು ಅಭಿಮಾನಿಗಳಿಂದಲೇ ಐಪಿಎಲ್‌ಗೆ ದೊಡ್ಡಮಟ್ಟದ ಕ್ರೇಜ್‌ ಬಂದಿದೆ. ವಿಶ್ವದ ಯಾವುದೇ ತಂಡಕ್ಕೂ ಇರದ ಲಾಯಲ್‌ ಫ್ಯಾನ್ಸ್‌ ಈ ತಂಡಕ್ಕಿದ್ದಾರೆ.. ಯಾಕೆಂದ್ರೆ ಆರ್‌ಸಿಬಿ ಅನ್ನೋದು ಅಭಿಮಾನಿಗಳ ಪಾಲಿಗೆ ಉಸಿರು ಅಂದ್ರೆ ತಪ್ಪಾಗಳಲ್ಲ. ಇಂಥಾ ಅಭಿಮಾನಿಗಳಿಗೆ ಇದೀಗ ದೈತ್ಯ ಆಟಗಾರ, ಮಾಜಿ ಕ್ರಿಕೆಟರ್‌ ಗುಡ್‌ನ್ಯೂಸ್‌ ಒಂದನ್ನ ಕೊಟ್ಟಿದ್ದಾನೆ. ಆತ ಮತ್ಯಾರು ಅಲ್ಲ. ಅಭಿಮಾನಿಗಳ ಆರಾಧ್ಯದೈವ ಅಂತಾನೇ ಕರಿಸಿಕೊಳ್ಳುವ ಎಬಿ ಡಿವಿಲಿಯರ್ಸ್.

ಹೌದು.. ಸಿಡಿಲಬ್ಬರದ ಬ್ಯಾಟರ್‌ ಎಬಿ ಡಿವಿಲಿಯರ್ಸ್ ಕ್ರಿಕೆಟ್ ಅಂಗಳಕ್ಕೆ ಮರಳುವ ಸುಳಿವು ನೀಡಿದ್ದಾರೆ. 2021 ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿರುವ ಎಬಿಡಿ, ಇದೀಗ ಮತ್ತೆ ಕ್ರಿಕೆಟ್ ಆಡಬೇಕೆಂಬ ಬಯಕೆ ಹೊರಹಾಕಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡುವ ಬಗ್ಗೆ ಎಬಿಡಿ ಮಾತನಾಡಿದ್ದಾರೆ. ನಾನು ಮತ್ತೆ ಕ್ರಿಕೆಟ್ ಅಂಗಳಕ್ಕೆ ಮರಳಬಹುದು. ಏಕೆಂದರೆ ನನ್ನ ಮಕ್ಕಳು ನಾನು ಆಡಬೇಕೆಂದು ಒತ್ತಡ ಹಾಕತ್ತಲೇ ಇರುತ್ತಾರೆ. ಅವರಿಗಾಗಿ ನಾನು ಮತ್ತೆ ಕ್ರಿಕೆಟ್ ಆಡಬೇಕು ಅಂತಿದ್ದೇನೆ ಎಂದಿದ್ದಾರೆ. ಈ ರೀತಿ ಎಬಿ ಡಿವಿಲಿಯರ್ಸ್‌ ಹೇಳಿರೋದು ಆರ್‌ಸಿಬಿ ಅಭಿಮಾನಿಗಳ ಆಸೆ ಹೆಚ್ಚಿಸಿದೆ. ಎಬಿಡಿ ಮತ್ತೆ ಬೆಂಗಳೂರು ಪರ ಆಟವಾಡಲಿ ಅಂತಾ ಬಯಸ್ತಿದ್ದಾರೆ. ಈ ಹಿಂದೆ ಕಣ್ಣು ದೃಷ್ಟಿ ಸಮಸ್ಯೆಯ ಕಾರಣ ದಿಢೀರ್ ನಿವೃತ್ತಿ ಘೋಷಿಸಿದ್ದ ಎಬಿಡಿ, ನನ್ನ ಎಡಗಣ್ಣು ಸ್ವಲ್ಪ ಮಸುಕಾಗಿದ್ದರೂ. ಈಗ ಬಲಗಣ್ಣು ಪ್ರಬಲವಾಗಿದೆ. ಹೀಗಾಗಿ ಚೆಂಡನ್ನು ಚೆನ್ನಾಗಿ ಗುರುತಿಸಬಲ್ಲೆ ಎಂದಿದ್ದರು. ಹೀಗೆ ಹೇಳಿದ ಬೆನ್ನಲ್ಲೇ ಇದೀಗ ಮತ್ತೆ ಮೈದಾನಕ್ಕೆ ಇಳಿಯುವ ಸುಳಿವು ನೀಡಿದ್ದಾರೆ.

ಎಬಿ ಡಿವಿಲಿಯರ್ಸ್‌ ಸೌತ್‌ ಆಫ್ರಿಕಾದವರಾದ್ರೂ ಭಾರತದಲ್ಲಿ ಅಭಿಮಾನಿಗಳ ಹೊಂದಿದ್ದಾರೆ. ಆರ್‌ಸಿಬಿ ಅಭಿಮಾನಿಗಳ ಅಚ್ಚುಮೆಚ್ಚಿನ ಆಟಗಾರರ ಸಾಲಿನಲ್ಲಿ ಕೊಹ್ಲಿ ನಂತರ ಸ್ಥಾನ ಯಾರಿಗಾದ್ರೂ ಇದ್ರೆ ಅದು ಎಬಿ ಡಿವಿಲಿಯರ್ಸ್ ಮಾತ್ರ.. ತನ್ನ 360 ಡಿಗ್ರಿ ಆಂಗಲ್‌ ಆಟದೊಂದಿಗೆ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸುತ್ತಿದ್ದ ಎಬಿಡಿ, ಕ್ರೀಡಾಂಗಣದ ಮೂಲೆ ಮೂಲೆಗೂ ಚೆಂಡನ್ನು ಬಾರಿಸುತ್ತಿದ್ದ ರೀತಿಗೆ ಅಪಾರ ಅಭಿಮಾನಿಗಳಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಮೂಲಕ ಅವರು ಭಾರತದಲ್ಲೂ ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಕ್ರಿಸ್ ಗೇಲ್ ಅವರೊಂದಿಗೆ ಹಲವು ವರ್ಷಗಳ ಕಾಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಎಬಿಡಿ ಆಡಿದ್ದಾರೆ. ಆರ್‌ಸಿಬಿ ಸೋಲು ಅಂತದಲ್ಲಿಯೂ ಒನ್‌ ಮ್ಯಾನ್‌ ಶೋ ಎನ್ನುವಂತೆ ಆಟವಾಡಿ ಹಲವು ಗೆಲುವು ತಂದುಕೊಟ್ಟಿದ್ದಾರೆ.. ಅಷ್ಟೇ ಅಲ್ಲದೆ ಆರ್ಸಿಬಿ ಪರ ಅತೀ ಹೆಚ್ಚು ರನ್ ಬಾರಿಸಿದ ವಿದೇಶಿ ಬ್ಯಾಟರ್ ಎಂಬ ದಾಖಲೆಯನ್ನೂ ಕೂಡ ಹೊಂದಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಬಳಿಕ ಆರ್ಸಿಬಿ ಪರ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟರ್ ಎಂಬ ದಾಖಲೆ ಕೂಡ ಎಬಿಡಿ ಹೆಸರಿನಲ್ಲಿದೆ. ಇಂಥಾ ಆಟಗಾರ ಇದೀಗ ಮತ್ತೆ ಕ್ರಿಕೆಟ್‌ ಆಡ್ತೇನೆ ಎಂದಿರೋದು ಆರ್‌ಸಿಬಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಬಾ.. ಗುರು.. ಅಂತಾ ಅಭಿಮಾನಿಗಳು ವೆಲ್‌ಕಮ್‌ ಮಾಡ್ತಿದ್ದಾರೆ.