ತುಮಕೂರು : ದ್ವಿಚಕ್ರವಾಹನಕ್ಕೆ ಅಡ್ಡ ಬಂದ ಯುವತಿಗೆ ನಿಂದನೆ ಮಾಡಿದಕ್ಕೆ ಯುವತಿ ಪರ ಮಾತನಾಡಿದ್ದಕ್ಕೆ ಮಚ್ಚಿನಿಂದ ಕೋಚ್ಚಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆಯೊಂದು ತುಮಕೂರು ನಗರದ ಮರಳೂರು ದಿಣ್ಣೆಯಲ್ಲಿ ನಡೆದಿದೆ.

ಇರ್ಫಾನ್ ಎಂಬ ಯವಕ ಮಚ್ಚಿನಿಂದ ಹಲ್ಲೆ ನಡೆಸಿದ ಆರೋಪಿಯಾಗಿದ್ದು, ಇರ್ಫಾನ್ ಎಂಬ ಯುವಕ ವಿಲೀಂಗ್ ಮಾಡುವಾಗ ಯುವತಿ ಬೈಕ್ ಗೆ ಅಡ್ಡ ಬಂದ್ದಾಳೆ. ದ್ವಿಚಕ್ರ ವಾಹನಕ್ಕೆ ಅಡ್ಡ ಬಂದು ಯುವತಿಯನ್ನ ಇರ್ಫಾನ್ ಕೆಳಗೆ ತಳ್ಳಿದ್ದಾನೆ. ಕೆಳಗೆ ಬಿದ್ದಿದ್ದ ಯುವತಿಯನ್ನ ಇರ್ಫಾನ್ ಚುಡಾಯಿಸಿ ಜಗಳ ಮಾಡಿದ್ದಾನೆ. ಇದೇ ವೇಳೆ ಮತ್ತೊಬ್ಬ ಇರ್ಫಾನ್ ಮತ್ತು ಸಾಧಿಕ್ ಎಂಬುವರು ಯುವತಿಯ ರಕ್ಷಣೆಗೆ ಬಂದಿದ್ದಾರೆ.
ಆರೋಪಿ ಇರ್ಫಾನ್ ಗೆ ಬೈದು ಬುದ್ದಿ ಹೇಳಿ, ಯುವತಿಯನ್ನ ರಕ್ಷಣೆ ಮಾಡಿದ್ಧಾರೆ.
ಇದರಿಂದ ಕುಪಿತಗೊಂಡ ಇರ್ಫಾನ್ ಸ್ನೇಹಿತರೊಂದಿಗೆ ಆಗಮಿಸಿ ಸಾಧಿಕ್ ಮೇಲೆ ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾನೆ. ಕುತ್ತಿಗೆ, ಕೈ, ತಲೆಗೆ ಲಾಂಗ್ ನಿಂದ ಹೊಡೆದು ಹಲ್ಲೆ ನಡೆಸಿದ್ದು, ಇರ್ಫಾನ್ (30) ಸ್ಥಿತಿ ಗಂಭೀರ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಲ್ಲೆ ಮಾಡಿರುವ ಇರ್ಫಾನ್ ಮತ್ತು ಆತನ ಸ್ನೇಹಿತ ಸ್ಥಳದಿಂದ ಪರಾರಿಯಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪುಂಡರ ಹಾವಳಿ ಮೀತಿಮೀರಿದ್ದು, ಪುಂಡರ ಹಾವಳಿ ತಡೆಯಲು ಜಯನಗರ ಪೊಲೀಸರ ವಿಫಲರಾಗಿದ್ದಾರೆಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.