ಕರ್ನಾಟಕ

ಬಾಲಕಿ ಕಿಡ್ನಾಪ್‌ ಕೇಸ್..ಕೊನೆಗೂ ಸಿಕ್ಕಿಬಿದ್ದ ಆರೋಪಿ..!

ಹತ್ತನೇ ತರಗತಿ ವಿದ್ಯಾರ್ಥಿನಿಯನ್ನು ಕಿಡ್ನಾಪ್‌ ಮಾಡಿದ್ದ ಪ್ರಕರಣ ಸಂಬಂಧ, ಬೆಂಗಳೂರಿನ ಕನಕಪುರ ಮೂಲದ ಅಭಿಷೇಕ್‌ ಎಂಬಾತನನ್ನು ಜೆಪಿ ನಗರ ಪೊಲೀಸರು ಬಂಧಿಸಿದ್ದಾರೆ.

ಹತ್ತನೇ ತರಗತಿ ವಿದ್ಯಾರ್ಥಿನಿಯನ್ನು ಕಿಡ್ನಾಪ್‌ ಮಾಡಿದ್ದ ಪ್ರಕರಣ ಸಂಬಂಧ, ಬೆಂಗಳೂರಿನ ಕನಕಪುರ ಮೂಲದ ಅಭಿಷೇಕ್‌ ಎಂಬಾತನನ್ನು ಜೆಪಿ ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ನಾಪತ್ತೆ ಹಿನ್ನೆಲೆ ಲುಕ್‌ಔಟ್‌ ನೋಟಿಸ್‌ ಹೊರಡಿಸಿದ್ದ ಪೊಲೀಸರು ಮಳವಳ್ಳಿಯಲ್ಲಿ ಬಂಧಿಸಿ, ಇದೀಗ ವಿಚಾರಣೆ ನಡೆಸುತ್ತಿದ್ದಾರೆ. 

ಕಳೆದ ನವೆಂಬರ್‌ 23ರಂದು ಎಂದಿನಂತೆ ಆರೋಪಿ ಬಳಿ ಟ್ಯೂಷನ್‌ಗೆ ಬಂದಿದ್ದ ಬಾಲಕಿಯನ್ನು, ಕಿಡ್ನಾಪ್‌ ಮಾಡಿ ಕರೆದೊಯ್ಯುವ ವೇಳೆ ಮನೆಯ ರೂಂನಲ್ಲೇ ಮೊಬೈಲ್‌ ಬಿಟ್ಟು ಎಸ್ಕೇಪ್‌ ಆಗಿದ್ದ. ಫೋನ್‌ ಬಳಕೆ ಮಾಡದೇ, ಫೋನ್‌ ಪೆ, ಗೂಗಲ್‌ ಪೆ, ಎಟಿಎಂ ಸೇರಿ ಆನ್‌ಲೈನ್‌ ಪೇಮೆಂಟ್‌ ಮಾಡದೇ ಓಡಾಡುತ್ತಿದ್ದ. ಈ ಬಗ್ಗೆ ಜೆಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.