ಮಂಗಳೂರು : ನಟ ಉಪೇಂದ್ರ ಅಭಿನಯದ ಬುದ್ದಿವಂತ ಚಿತ್ರದ ಮಾದರಿಯಲ್ಲೇ ಹಲವು ಮಹಿಳೆಯರಿಗೆ ವಂಚನೆ ಎಸಗುತ್ತಿದ್ದ ಖತರ್ನಾಕ್ ಆರೋಪಿಯನ್ನು ಮಂಗಳೂರಿನ ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ.
ಈತನಿಗೆ ಕ್ರಿಶ್ಚಿಯನ್ ಸಮುದಾಯದ ಶ್ರೀಮಂತ ಮಹಿಳೆಯರನ್ನೆ ಟಾರ್ಗೆಟ್ ಮಾಡಿ, ಕೃತ್ಯ ಎಸಗುತ್ತಿದ್ದನು.
ಈತ ಕೊಂಕಣಿ ಭಾಷೆಯಲ್ಲಿ ಚೆಂದ ಚೆಂದದ ಮಾತನಾಡಿ ಅವರನ್ನು ತನ್ನ ಬುಟ್ಟಿಗೆ ಬೀಳಿಸಿಕೊಳ್ಳುತ್ತಿದ್ದನು. ಮಂಗಳೂರು-ಉಡುಪಿ ಭಾಗದಲ್ಲಿ ಈತ ಕೃತ್ಯ ಎಸಗಿ ಎಸ್ಕೇಪ್ ಆಗುತ್ತಿದ್ದನು. ಸೋಶಿಯಲ್ ಮೀಡಿಯಾಗಳ ಮೂಲಕ ಮಹಿಳೆಯರ ಸಂಪರ್ಕಕ್ಕೆ ಬಂದು ಅವರ ಸ್ನೇಹ ಬೆಳೆಸಿ ನಂತರ ಅವರ ಮನೆಗೆ ಹೋಗುತ್ತಿದ್ದನು ಆಸಾಮಿ. ಮಹಿಳೆಯ ಜೊತೆ ಸರಸ ಸಲ್ಲಾಪ ನಡೆಸಿ ಬಳಿಕ ಅವರ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಎಸ್ಕೇಪ್ ಆಗುತ್ತಿದ್ದನು.
ಹೌದು, ಸಾಕಷ್ಟು ಪ್ರಕರಣಗಳಲ್ಲಿ ಭಾಗಿಯಾಗಿ ಮೋಸ್ಟ್ ವಾಂಟೆಂಡ್ ಆಗಿದ್ದ ಆರೋಪಿ ಮಥಾಯೀಸ್ ನನ್ನು ಸದ್ಯ ಪೊಲೀಸರು ಬಂಧಿಸಿದ್ದು, ಸಾಕಷ್ಟು ಪ್ರಕರಣಗಳಲ್ಲಿ ಭಾಗಿಯಾಗಿ ಮೋಸ್ಟ್ ವಾಂಟೆಂಡ್ ಆಗಿದ್ದ ಮಥಾಯೀಸ್ ಕೋರ್ಟ್ ಗೆ ವಿಚಾರಣೆಗೆ ಹಾಜರಾಗದೇ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದನು. ಮಹಿಳೆಯೊಬ್ಬರ ಮನೆಯಲ್ಲಿ ಪೊಲೀಸರು ಈತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.