ಮೈಸೂರು ನಗರಪಾಲಿಕೆ ಸಿಬ್ಬಂದಿ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಅದೇನಂದರೆ ನಕಲಿ ಬಿಲ್ ನೀಡಿ ಸುಮಾರು ಎರಡು ಕೋಟಿಗೂ ಹೆಚ್ಚು ಹಣ ಗುಳುಂ ಮಾಡಿರುವ ಆರೋಪ ಕೇಳಿ ಬಂದಿದೆ. ಅಲ್ಲದೇ ವಾಟರ್ ಇನ್ಸ್‌ಪೆಕ್ಟರ್‌ಗಳ ಜೊತೆ ಡಾಟಾ ಎಂಟ್ರಿ ಆಪರೇಟರ್‌ಗಳು ಕೂಡ ಶಾಮೀಲಾಗಿರುವ ಆರೋಪ ಕೇಳಿಬಂದಿದ್ದು, ಆರು ಮಂದಿ ವಾಟರ್ ಇನ್ಸ್‌ಪೆಕ್ಟರ್‌ಗಳನ್ನು ಅಮಾನತು ಮಾಡಲು ಪಾಲಿಕೆ ಮುಂದಾಗಿದೆ.
ಮಹಾನಗರ ಪಾಲಿಕೆ ವಾಣಿವಿಲಾಸ ನೀರು ಸರಬರಾಜು ವಿಭಾಗದಲ್ಲಿ ಆರೋಪ ಕೇಳಿ ಬಂದಿದೆ. ನಕಲಿ ನೀರಿನ ಬಿಲ್ ತಯಾರಿಸಿ ಪಾಲಿಕೆಗೆ ಸೇರಬೇಕಾದ ಹಣ ಜೇಬಿಗಿಳಿಸಿರುವ ಆರೋಪದಡಿ, ಸಮಾನ ವೇತನ, ಸಮಾನ ಕೆಸಲದ ಆಧಾರದ ಮೇಲೆ ನೇಮಕವಾಗಿದ್ದ 15 ಮಂದಿ ನೌಕರರನ್ನು ವಜಾಗೊಳಿಸುವ ಸಾಧ್ಯತೆ ಇದೆ.
ಅಲ್ಲದೇ ಹಣವನ್ನು ಕೂಡ ಹಿಂತಿರುಗಿಸುವಂತೆ ಸೂಚನೆ ನೀಡಲಾಗಿದ್ದು, ಇದೀಗ 75 ಹಣವನ್ನು ಹಿಂತಿರುಗಿಸಲಾಗಿದೆ ಎನ್ನಲಾಗುತ್ತಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಹಾನಗರ ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಷರೀಫ್, ಅಕ್ರಮ ಎಸಗಿದ ನೌಕರರ ವಜಾಕ್ಕೆ ನಗರಾಭಿವೃದ್ಧಿ ಇಲಾಖೆಗೆ ಪತ್ರವನ್ನು ಕೂಡ ಬರೆದಿದ್ದಾರೆ.