ಹೈಕೋರ್ಟ್‌ನಲ್ಲಿ ಇಂದು ನಟ ದರ್ಶನ್ ಮಧ್ಯಂತರ ಜಾಮೀನು ಹಾಗೂ ಸಾಮಾನ್ಯ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ನಟನ ಪಾಲಿಗೆ ಇಂದು ಬಿಗ್ ಡೇ ಎನ್ನಲಾಗುತ್ತಿದೆ. ಬೆನ್ನು ನೋವಿಗೆ ಚಿಕಿತ್ಸೆ ದೃಷ್ಟಿಯಿಂದ ದರ್ಶನ್‌ಗೆ ನೀಡಲಾಗಿದ್ದ ಮಧ್ಯಂತರ ಜಾಮೀನು ಅವಧಿ, ಇದೇ ತಿಂಗಳ 11ಕ್ಕೆ ಅಂತ್ಯವಾಗಲಿದೆ. ಹೀಗಾಗಿ ಮಧ್ಯಂತರ ಜಾಮೀನು ವಿಸ್ತರಣೆ ಮಾಡುವಂತರ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು.
ಇದೇ ವೇಳೆ ದರ್ಶನ್ ಸೇರಿ ಎಂಟು ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ನಿಯಮಿತ ಜಾಮೀನು ನಿರೀಕ್ಷೆಯಲ್ಲಿರುವ ದರ್ಶನ್ಮ ಪವಿತ್ರಾ ಗೌಡ ಸೇರಿ ಎಂಟು ಜನರ ಬೇಲ್ ಭವಿಷ್ಯ ಇಂದು ನಿರ್ಧಾರವಾಗಲಿದೆ.