ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ಮುಗಿ ಬಿದ್ದಿರುವ ಸರ್ಕಾರ ಚಿನ್ಮಯ್ ಕೃಷ್ಣ ದಾಸ್ ಬಳಿಕ ಮತ್ತೊಬ್ಬ ಹಿಂದೂ ಸನ್ಯಾಸಿಯನ್ನು ಅರೆಸ್ಟ್ ಮಾಡಿದೆ.
ಶನಿವಾರ ಬಾಂಗ್ಲಾದೇಶದ ಚಟ್ಟೋಗ್ರಾಮ್ ನಲ್ಲಿ ಶ್ಯಾಮ್ ದಾದ್ ಪ್ರಭು ಎಂಬುವವರನ್ನು ಅರೆಸ್ಟ್ ಮಾಡಲಾಗಿದೆ. ಇವರು ಜೈಲಿನಲ್ಲಿಉರುವ ಚಿನ್ಮಯ್ ಕೃಷ್ಣ ದಾಸ್ ರನ್ನು ಭೇಟಿಯಾಗಲು ಜೈಲಿಗೆ ತೆರಳಿದ್ದರು. ಈ ವೇಳೆ ಅವರನ್ನೂ ಬಂಧಿಸಲಾಗಿದೆ ಎಂದು ಕೋಲ್ಕತ್ತದಲ್ಲಿರುವ ಇಸ್ಕಾನ್‌ನ ಉಪಾಧ್ಯಕ್ಷ ಮತ್ತು ವಕ್ತಾರ ರಾಧಾರಮಣ ದಾಸ್ ಮಾಹಿತಿಯನ್ನು ಹಂಚಿಕೊಂಡಿದಾರೆ.
Does he look like a terrorist?#FreeISKCONMonks Bangladesh. The arrest of innocent #ISKCON brahmacharis are deeply shocking & disturbing. pic.twitter.com/VG6u7jlnXB
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಚಿನ್ಮಯ್ ಕೃಷ್ಣ ದಾಸ್ ವಿರೋಧಿಸಿದ್ದರು. ಅಲ್ಪಸಂಖ್ಯಾತರಾಗಿರುವ ಹಿಂದೂಗಳಿಗೆ ಸೂಕ್ತ ರಕ್ಷಣೆ ಒದಗಿಸಿ ಎಂದು ಪ್ರತಿಭಟನೆಗಳನ್ನು ನಡೆಸಿದ್ದರು. ಹಿಂದೂಗಳ ಪ್ರತಿಭಟನೆ ಹೆಚ್ಚಿದ ಹಿನ್ನೆಲೆಯಲ್ಲಿ ದೇಶದ್ರೋಹ ಕೇಸ್ ನಲ್ಲಿ ಚಿನ್ಮಯ್ ಕೃಷ್ಣ ದಾಸ್ ರನ್ನು ಅರೆಸ್ಟ್ ಮಾಡಲಾಗಿದೆ. ಚಿನ್ಮಯ್ ಕೃಷ್ಣ ದಾಸ್ ಅರೆಸ್ಟ್ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಹಿಂದೂಗಳು ಸರ್ಕಾರದ ವಿರುದ್ಧ ಪ್ರತಿಭಟನೆ ಮುಂದುವರೆಸಿದಾರೆ. ಈಗ ಮತ್ತೊಬ್ಬ ಹಿಂದೂ ಸನ್ಯಾಸಿಯನ್ನು ಅರೆಸ್ಟ್ ಮಾಡಲಾಗಿದ್ದು ಬಾಂಗ್ಲಾದಲ್ಲಿ ಹಿಂದೂಗಳ ಸುರಕ್ಷತೆಯ ಕುರಿತು ಪ್ರಶ್ನೆ ಎದ್ದಿದೆ.