ಕರ್ನಾಟಕ

ಎಲೆಕ್ಷನ್‌ ಮುಗಿದ ಬಳಿಕೆ ಫ್ರೀ ಈಗ ಬೇಡ ಎನ್ನುತ್ತಿದೆ - ಆರ್‌.ಅಶೋಕ್‌

ಕಾಂಗ್ರೆಸ್‌ ಪಕ್ಷದೊಳಗೆ ಭಿನ್ನಾಭಿಪ್ರಾಯಗಳಿವೆ

ಬೆಂಗಳೂರು - ಕರ್ನಾಟಕಕ್ಕೆ ಬಂದ ಶಶಿ ತರೂರ್ ಉಚಿತ ಆಹಾರ ಯೋಜನೆಯಿಂದ ಉಪಯೋಗ ಇಲ್ಲ ಎಂದಿದ್ದಾರೆ. ಉಚಿತ ಬದಲು ದುಡ್ಡು ಕೊಟ್ಟು ಕೊಂಡುಕೊಳ್ಳುವಂತೆ ಮಾಡಬೇಕು ಅಂತ ಹೇಳಿದ್ದಾರೆ. ಕಾಂಗ್ರೆಸ್‌ನವರೇ ಉಚಿತ ಕೊಡೋ ಮೂಲಕ ಸಬಲಿಕರಣ ಮಾಡ್ತಿದ್ದೇವೆ ಅಂತ ಹೇಳಿದರು. ಈಗ ಪ್ರೀ ಕೊಡಬಾರದು ಅಂತ ನಿನ್ನೆ ಹೇಳಿದ್ದಾರೆ. ವೋಟ್ ಗಾಗಿ ಪ್ರೀ ಅಂತ ಹೇಳಿ.. ವೋಟ್ ಮುಗಿದ ಮೇಲೆ ಯಾಕ್ ಬೇಕು ಅಂತ ಪ್ರಶ್ನೆ ಮಾಡ್ತಿದ್ದಾರೆ ಈಗ ಉಲ್ಟಾ ಹೊಡೆಯುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಆರ್‌.ಅಶೋಕ್‌ ಆಕ್ರೋಶ ಹೊರಹಾಕಿದ್ದಾರೆ. 

ಕಾಂಗ್ರೆಸ್ ಒಂದು ರೀತಿ ಗೋಮುಖ ವ್ಯಾಘ್ರ ಆಗಿದೆ ಇದಕ್ಕೆ ನಿದರ್ಶನವೆಂದರೆ ಮೈಸೂರು ಗಲಾಟೆಯಾಗಿದೆ. ಮೈಸೂರು ಗಲಾಟೆ ಪ್ರೀ ಪ್ಲಾನ್ ಗಲಾಟೆ ಮಾಡಿದೆ. ಅಷ್ಟು ಜನ ಒಟ್ಟಿಗೆ ಬರಲು ಸಾಧ್ಯವಿಲ್ಲ.ಅಷ್ಟು ಕಲ್ಲು ಬರಲು ಹೇಗೆ ಸಾಧ್ಯ. ಧರ್ಮಕ್ಕಾಗಿ ತಮ್ಮ ಮಕ್ಕಳನ್ನೇ ಬಲಿ ಕೊಡ್ತೇವೆ ಅಂತ ಹೇಳಿದ್ದಾರೆ. ಆದರೆ ಕಾಂಗ್ರೆಸ್‌ನಿಂದ ಯಾವುದೇ ಕ್ರಮ ಇಲ್ಲ , ಡಿಕೆಶಿ ಪೊಲೀಸರನ್ನ ಹೊಗಳಿದ್ರೆ, ರಾಜಣ್ಣ ಬೈಯ್ದಿದ್ದಾರೆ. ಹೀಗೆ ಎಲ್ಲ ರೀತಿಯಲ್ಲೂ ಕಾಂಗ್ರೆಸ್‌ನಲ್ಲಿ ಒಳ ಭಿನ್ನಾಭಿಪ್ರಾಯವೂ ಇದೆ. 


ಪರಮೇಶ್ವರ್‌ಗೆ ಖಾತೆ ಇಷ್ಟ ಇಲ್ಲ ಅನಿಸುತ್ತೆ. ಅದಕ್ಕಾಗಿ ಕ್ರಮ ಕೈಗೊಳ್ಳುತ್ತೇವೆ ಅಂತ ಹೇಳ್ತಾರೆ. ಡಿಕೆಶಿ ನಮ್ಮ ಬ್ರದರ್ ಅಂದ್ರು. ನಂತರ ಬೇಬಿ ಸಿಟಿಂಗ್ ಅನ್ನೋದು . ಕಾಂಗ್ರೆಸ್‌ನವರು ಮುಸ್ಲಿಂರ ಭಿಕ್ಷೆಯಲ್ಲಿ ಇರೋದು. ಅದಕ್ಕೆ ಅವರನ್ನ ಮುಟ್ಟಲು ಆಗಲ್ಲ. ಹೀಗಾಗೇ ಹುಬ್ಬಳ್ಳಿ & ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಾಟೆ ವಾಪಸ್ ಪಡೆಯಲು ಮುಂದಾಗಿದ್ದಾರೆ. ಕಾನೂನನ್ನ ಕಾಪಡಬೇಕಾದವರ ಕೈಯನ್ನ ಕಾಂಗ್ರೆಸ್ ಕಟ್ಟಿ ಹಾಕಿದೆ. ಮುಸ್ಲಿಂ ಮುಟ್ಟಿದರೆ ನಿಮಗೆ ಉಳಿಗಾಲವಿಲ್ಲ ಅಂತ ಕಾಂಗ್ರೆಸ್ ಹೇಳ್ತಿರಬೇಕು.  ಮೈಸೂರು ಗಲಾಟೆಯಲ್ಲಿ ಯಾವುದಾದರೂ ಒಬ್ಬರ ಪೊಲೀಸರ ಸಸ್ಪೆಂಡ್ ಆಗುತ್ತದೆ. ಹೊಡೆದು ಆಳುವ ನೀತಿ ಕಾಂಗ್ರೆಸ್ ಮಾಡುತ್ತಿದೆ. 

ಇದೇ ವೇಳೆ RSS ಕಡೆಯಿಂದ ದಾಳಿ ಮಾಡಿದ್ದಾರೆ ಎಂಬ ಆರೋಪಕ್ಕೂ ಉತ್ತರ ನೀಡಿದ್ದಾರೆ. ಕಾಂಗ್ರೆಸ್ ಬುದ್ದಿ ಭ್ರಮಣೆ ಆಗಿದೆ . ಒಂದೇ ದಿನ ದಾಡಿ ಬಿಟ್ಟುಕೊಂಡು ಬರಲು ಆಗುತ್ತಾ..?
ಅವರಿಗೆ ಅಷ್ಟು ವೇಷ ಭೂಷಣ ಎಲ್ಲಿಸಿಗುತ್ತೆ ಹೇಳಿ. ಆರ್ ಎಸ್ ಎಸ್‌ಗೂ ಏನ್ ಸಂಬಂಧ ಇದೆ. ಇನ್ನೂ ಸಿಸಿಟಿವಿ ಕ್ಯಾಮರಾದಲ್ಲಿ ಯಾವ ಆರ್‌ಎಸ್‌ಎಸ್‌ನವರು ಬಂದು ಹೋಗಿದ್ದಾರೆ ತೋರಿಸಿದ್ದಾರೆ. ರಾಜಕೀಯ ತೆವಲಿಗಾಗಿ ಆರ್‌ಎಸ್‌ಎಸ್ ಮೇಲೆ ಆರೋಪ ಮಾಡ್ತಿದ್ದಾರೆ. ಈ ಘಟನೆಯಲ್ಲಿ ನ್ಯಾಯ ಸಿಗುತ್ತೆ ಅಂತ ನಮಗೆ & ರಾಜ್ಯದ ಜನತೆಗೆ ನಂಬಿಕೆ ಇಲ್ಲ ಎಂದು ಅಶೋಕ್‌ ಆಕ್ರೋಶ ಹೊರಹಾಕಿದ್ದಾರೆ.