ಢಾಕಾ: ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಮೇಲದ ದೌರ್ಜನ್ಯ ಮುಂದುವರೆದಿದ್ದು, ಭಾರತದ ಬಸ್ ಮೇಲೂ ಸಹ ಬಾಂಗ್ಲಾದಲ್ಲಿ ದಾಳಿ ನಡೆದಿದ್ದು, ಅದರಲ್ಲಿದ್ದು ಭಾರತೀಯ ಪ್ರಯಾಣಿಕರಿಗೆ ಜೀವ ಬೆದರಿಕೆ ಹಾಕಲಾಗಿದೆ.
ಈಶಾನ್ಯ ರಾಜ್ಯಗಳಲ್ಲಿ ಒಂದಾದ ತ್ರಿಪುರಾದ ರಾಜಧಾನಿ ಅಗರ್ತಲಾದಿಂದ ಪಶ್ಚಿಮ ಬಂಗಾಳದ ಕೋಲ್ಕತ್ತಕ್ಕೆ ಬಾಂಗ್ಲಾದ ಮೂಲಕ ಬಸ್ ಸಂಚಾರವಿದೆ. ಭಾನುವಾರ ಅಗರ್ತಲಾದಿಂದ ಢಾಕಾ ಮೂಲಕ ಕೋಲ್ಕತ್ತಕ್ಕೆ ಬರುತ್ತಿದ್ದ ಬಸ್ ಮೇಲೆ ಬಾಂಗ್ಲಾದ ಬ್ರಹ್ಮನ್‌ಬಾರಿಯಾ ಜಿಲ್ಲೆಯ ಬಿಶ್ವಾ ರಸ್ತೆಯಲ್ಲಿ ದಾಳಿ ನಡೆದಿದೆ. ಕೆಲವು ಬಾಂಗ್ಲಾದೇಶಿಯರು ಉದ್ದೇಶಪೂರ್ವಕವಾಗಿ ಬಸ್‌ಗೆ ಟ್ರಕ್ ಡಿಕ್ಕಿ ಹೊಡೆಸಿದ್ದಾರೆ. ಆ ಬಳಿಕ ಸ್ಥಳೀಯರು ಭಾರತ ವಿರೋಧಿ ಘೋಷಣೆ ಕೂಗಿದಾರೆ. ಜತೆಗೆ ಬಸ್‌ನಲ್ಲಿದ್ದ ಭಾರತೀಯರಿಗೆ ಜೀವ ಬೆದರಿಕೆ ಹಾಕಿದಾರೆ ಎಂದು ತ್ರಿಪುರಾದ ಸಾರಿಗೆ ಸಚಿವ ಸುಸ್ತಾನ್ ಚೌಧರಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದಾರೆ.
ಇನ್ನು ಮತ್ತೊಂದು ಘಟನೆಯಲ್ಲಿ ಶನಿವಾರ ರಾತ್ರಿ ಬಾಂಗ್ಲಾದೇಶದ ಪತ್ರಕರ್ತೆ ಮುನ್ನಿ ಸಹಾ ರಿಗೆ ಕೆಲವರು ಬೆದರಿಕೆ ಹಾಕಿದಾರೆ. ನೀವು ತಪ್ಪು ಮಾಹಿತಿ ಹಂಚುತ್ತಿದ್ದೀರಿ. ಬಾಂಗ್ಲಾದೇಶವನ್ನು ಭಾರತದ ಭಾಗವಾಗಿಸಲು ಬೇಕಾಗಿರುವ ಎಲ್ಲಾ ಪ್ರಯತ್ನವನ್ನು ಮಾಡುತ್ತಿದ್ದೀರಿ ಎಂದು ಪತ್ರಕರ್ತೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದಾರೆ.