ಕರ್ನಾಟಕ

ಕಾರಂಜಾ ಹಿನ್ನೀರಿನಿಂದ ಜಲಾವೃತಗೊಂಡ ಕೃಷಿ ಭೂಮಿ.!

ಬೀದರ್‌ ದಕ್ಷಿಣ ಮತ್ತು ಹುಮನಾಬಾದ್‌ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 30 ಗ್ರಾಮಗಳ ಒಟ್ಟು 1011 ಎಕರೆ ಪ್ರದೇಶ ಭೂಮಿ ಕಾರಂಜಾ ಹಿನ್ನೀರಿನಿಂದ ಹೆಚ್ಚುವರಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರಕ್ಕಾಗಿ ರಾಜ್ಯ ಸರಕಾರಕ್ಕೆ ಕರ್ನಾಟಕ ನೀರಾವರಿ ನಿಗಮ ನಿಯಮಿತ ಕಾರಂಜಾ ನಿರ್ಮಾಣ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ.

ಬೀದರ್‌ : ಜಿಲ್ಲೆಯ ಕಾರಂಜಾ ಜಲಾಶಯ ರೈತರ ಜೀವನಾಡಿಯಾಗಿದ್ದು, ಈಗ ಜಲಾಶಯದ ಹಿನ್ನೀರಿನಲ್ಲಿ ಹೆಚ್ಚುವರಿಯಾಗಿದೆ. ಹಿನ್ನೆಲೆ ಬರೋಬ್ಬರಿ 1011 ಎಕರೆ ಪ್ರದೇಶದ ಕೃಷಿ ಭೂಮಿ ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿದೆ. ಸುಮಾರು 300ಕ್ಕಿಂತ ಹೆಚ್ಚು ಅನ್ನದಾತರು ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.

ಕಾರಂಜಾ ಜಲಾಶಯದಿಂದ ಮಾಂಜ್ರಾ ನದಿಗೆ‌ 318 ಕ್ಯೂಸೆಕ್ ನೀರು ಬಿಡುಗಡೆ

ಹೌದು, ಬೀದರ್‌ ದಕ್ಷಿಣ ಮತ್ತು ಹುಮನಾಬಾದ್‌ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 30 ಗ್ರಾಮಗಳ ಒಟ್ಟು 1011 ಎಕರೆ ಪ್ರದೇಶ ಭೂಮಿ ಕಾರಂಜಾ ಹಿನ್ನೀರಿನಿಂದ ಹೆಚ್ಚುವರಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರಕ್ಕಾಗಿ ರಾಜ್ಯ ಸರಕಾರಕ್ಕೆ ಕರ್ನಾಟಕ ನೀರಾವರಿ ನಿಗಮ ನಿಯಮಿತ ಕಾರಂಜಾ ನಿರ್ಮಾಣ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ ಇದುವರೆಗೆ ನಯಾಪೈಸೆ ಪರಿಹಾರ ಬಂದಿಲ್ಲ ಎಂದು ರೈತರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಕಾರಂಜಾ ಜಲಾಶಯದ ಹಿನ್ನೀರಿನಿಂದ 30 ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿ ಸಾವಿರಾರು ಎಕರೆ ಜಮೀನು ಮುಳುಗಡೆಯಾಗಿದ್ದು, ಫಲವತ್ತಾದ ಮಣ್ಣು, ಬೆಳೆ ಹಾನಿವಾಗಿವೆ. ಕಬ್ಬು, ತೊಗರಿ, ಸೋಯಾಬಿನ್‌ ಇತರೆ ಬೆಳೆಗಳು ಸಂಪೂರ್ಣ ನೀರು ಪಾಲಾಗಿವೆ. ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.