ಕರ್ನಾಟಕ

ಐಶ್ವರ್ಯ ಗೌಡ ವಂಚನೆ ಕೇಸ್...ಹೆಚ್‌ಡಿಕೆ ಮೊರೆ ಹೋದ ಸಂತ್ರಸ್ತರು..!

ವಂಚನೆ ಆರೋಪಿ ಐಶ್ವರ್ಯಾ ಗೌಡ ಪ್ರಕರಣ ಸಂಬಂಧ, ನ್ಯಾಯಕ್ಕಾಗಿ ದೂರುದಾರರು ಕೇಂದ್ರ ಸಚಿವರ ಮೊರೆ ಹೋಗಿದ್ದಾರೆ..

ವಂಚನೆ ಆರೋಪಿ ಐಶ್ವರ್ಯಾ ಗೌಡ ಪ್ರಕರಣ ಸಂಬಂಧ, ನ್ಯಾಯಕ್ಕಾಗಿ ದೂರುದಾರರು ಕೇಂದ್ರ ಸಚಿವರ ಮೊರೆ ಹೋಗಿದ್ದಾರೆ. ಮಂಡ್ಯ ಪೂರ್ವ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿರುವ ಪೂರ್ಣಿಮಾ ಹಾಗೂ ರವಿಕುಮಾರ್‌ ಎಂಬುವರು, ಇಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ. ಮಂಡ್ಯದ ಕೆ.ಎಂ.ದೊಡ್ಡಿಯಲ್ಲಿ ಹೆಚ್ಡಿಕೆ ಭೇಟಿ ಮಾಡಿದ ನೊಂದವರು, ನ್ಯಾಯದೊರಕಿಸಿ ಕೊಡುವಂತೆ ಮನವಿ ಮಾಡಿದ್ದಾರೆ. ನಾನು ಅಧಿಕಾರಿಗಳ ಜೊತೆ ಮಾತನಾಡಿದ್ದು, ಸಿರೀಯಸ್ ಆಕ್ಷನ್ ತೆಗೆದುಕೊಳ್ಳುತ್ತಾರೆ‌. ಮೊದಲೆ ನನಗೆ ನೀವು ಯಾಕೆ ಹೇಳಲಿಲ್ಲ. 8 ವರ್ಷದ ಹಿಂದೆ ಕೊಟ್ಟು ಈಗ ಹೇಳ್ತಿದ್ದೀರಾ.? ಅದರಲ್ಲಿ ದೂರಿನಲ್ಲಿ ಬೇರೆ ಅನಿತಾ, ನಿಖಿಲ್ ಹೆಸರೂ ಹೇಳಿದ್ದೀರ. ಆದ್ರೂ ನಿಮ್ಮ ಪರ ಧ್ವನಿ ಎತ್ತುತ್ತೀನಿ, ನಿಮ್ಮ ಜೊತೆ ಇರ್ತೀವಿ ಎಂದು ಹೆಚ್ಡಿಕೆ ಭರವಸೆ ನೀಡಿದ್ದಾರೆ.