ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಶಿವನಿ ಗ್ರಾಮದಲ್ಲಿ ನಡೆದಿದ್ದ, ಅತ್ಯಾಚಾರಕ್ಕೆ ಯತ್ನಿಸಿ ಹತ್ಯೆ ಮಾಡಲಾಗಿದೆ ಎಂದು ಸುದ್ದಿಯಾಗಿದ್ದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ತನ್ನ ತಂದೆಯಿಂದಲೇ ಬಾಲಕಿ ಕೊಲೆಯಾಗಿದ್ದಾಳೆ ಎಂಬ ಭಯಾನಕ ಮಾಹಿತಿ ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಮಗಳ ಹತ್ಯೆ ಪ್ರಕರಣದಲ್ಲಿ ತಂದೆ ಮಂಜುನಾಥ್ ನ ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್ ಪತ್ನಿ ಮೇ ಅನೈತಿಕ ಸಂಬಂಧದ ಅನುಮಾನ ಹೊಂದಿದ್ದ ಮಂಜುನಾಥ್, ನಿತ್ಯವೂ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಅದೇ ರೀತಿ ಸೆಪ್ಟೆಂಬರ್ 19ರಂದು ಕುಡಿದು ಬಂದ ತಂದೆಯನ್ನು, ಬಾಲಕಿ ಪ್ರಶ್ನೆ ಮಾಡಿದ್ದಕ್ಕೆ ಕೋಪಗೊಂಡ ಮಂಜುನಾಥ್ ಮಗಳ ಮೇಲೆ ಹಲ್ಲೆ ಮಾಡಿ ಕೊಂಡಿದ್ದಾನೆ.