ಕರ್ನಾಟಕ

ಜಮೀರ್‌ ಅಹಮದ್‌ ಮಗನಿಗೆ ಸಂಕಷ್ಟ..ಸಚಿವನ ಪುತ್ರನ ಮೇಲೆ ಆರೋಪ ಮಾಡಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ..!

ಸಚಿವ ಜಮೀರ್‌ ಅಹಮದ್‌ ಅವರ ಪುತ್ರ ಜೈದ್‌ ಖಾನ್‌ ಹಾಗೂ ಕಲ್ಟ್‌ ನಿರ್ದೇಶಕ ಅನಿಲ್‌ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ.

ಸಚಿವ ಜಮೀರ್‌ ಅಹಮದ್‌ ಅವರ ಪುತ್ರ ಜೈದ್‌ ಖಾನ್‌ ಹಾಗೂ ಕಲ್ಟ್‌ ನಿರ್ದೇಶಕ ಅನಿಲ್‌ ಮೇಲೆ ಗಂಭೀರ ಆರೋಪ ಕೇಳಿ  ಬಂದಿದೆ. ಅದೇನಂದ್ರೆ ಚಿತ್ರತಂಡದ ಯಡವಟ್ಟಿನಿಂದ ಬೆಂಗಳೂರಿನಲ್ಲಿ ಡ್ರೋನ್‌ ಟೆಕ್ನಿಶಿಯನ್‌ ಆತ್ಮಹತ್ಯೆಗೆ ಯತ್ನಿಸಿರುವ ಆರೋಪ ಕೇಳಿ ಬಂದಿದೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಸಂತೋಷ್‌ ಎನ್ನಲಾಗಿದೆ. ಬೆಂಗಳೂರಿನ ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಳೆದ 25ನೇ ತಾರೀಕಿನಂದು ಚಿತ್ರದುರ್ಗದಲ್ಲಿ ಕಲ್ಟ್‌ ಚಿತ್ರದ ಶೂಟಿಂಗ್‌ ನಡೆಸುತ್ತಿದ್ದ ವೇಳೆ, ಡ್ರೋನ್ ವಿಂಡ್ ಫ್ಯಾನ್ ಗೆ ಟಚ್ ಆಗಿ ಪೀಸ್ ಪೀಸ್ ಆಗಿತ್ತು.ಮೊದಲೇ ರಿಸ್ಕ್ ಇದೆ ಅಂತ ಎಚ್ಚರಿಕೆ ಕೊಟ್ಟಿದ್ರು ನಿರ್ದೇಶಕ ಮಾಡಲೇ ಬೇಕು ಎಂದು ಒತ್ತಾಯ ಮಾಡಿದ್ರು ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ  ಇದಾದ ಬಳಿಕ ಸಂತೋಷ್‌ ಗೆ ಸ್ವಲ್ಪವೂ ನಷ್ಟವನ್ನು ಕಟ್ಟಿಕೊಡದ ಕಾರಣ, ಅಲ್ಲದೇ ಸಿನಿಮಾ ನಿರ್ಮಾಣ ಮಾಡುತ್ತಿರುವ ಜೈದ್‌ ಖಾನ್‌ ಸಂತೋಷ್‌ ಬಳಿ ವೈಟ್‌ ಪೇಪರ್‌ ಮೇಲೆ ಸಹಿ ಮಾಡಿಸಿಕೊಂಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಇದರಿಂದಲೇ ಸಂತೋಷ್‌ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಮಾಗಡಿ ರೋಡ್ ಪೋಲಿಸ್ ಠಾಣೆಗೆ ಸಂತೋಷ್‌ ಅಕ್ಕ ದೂರು ನೀಡಿದ್ರು. ಆದ್ರೆ ಪೊಲೀಸರು ಕೂಡ ದೂರು ಸ್ವೀಕರಿಸದೇ ವಾಪಸ್‌ ಕಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.