ಕರ್ನಾಟಕ

ಎಡೆಯೂರು ಸಿದ್ದಲಿಂಗೇಶ್ವರ ದೇಗುಲಕ್ಕೆ ಕೆಟ್ಟುಹೋದ ಬೆಲ್ಲ ಸರಬರಾಜು..!

ಈ ಹಿಂದೆ ನಾಗಮಂಗಲ ತಹಶೀಲ್ದಾರ್ ಆಗಿದ್ದ ಕುಂಞ ಅಹಮದ್ ಅವರು, ಉಪ ವಿಭಾಗಾಧಿಕಾರಿ ಮೌಖಿಕ ಆದೇಶದ ನೆಪದಲ್ಲಿ ಎಡೆಯೂರು ದೇಗುಲಕ್ಕೆ ಕೆಟ್ಟುಹೋದ ಬೆಲ್ಲ ಸರಬರಾಜು ಎಂಬ ಆರೋಪ ಕೇಳಿ ಬರುತ್ತಿದೆ.

ಇತ್ತೀಚೆಗೆ ತಿರುಪತಿ ಲಡ್ಡು ಪ್ರಸಾದದಲ್ಲಿ, ಕಲಬೆರಕೆ ತುಪ್ಪ ಬಳಸಿ ಪ್ರಸಾದ ತಯಾರಿಸಲಾಗುತ್ತಿದೆ ಎಂಬ ವಿವಾದ, ಸಾಕಷ್ಟು ಸಂಚಲನ ಮೂಡಿಸಿತ್ತು. ಇದೀಗ ಅದೇ ಸರದಿ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ, ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿ ದೇಗುಲಕ್ಕೆ ಬಂದಿದೆ. ಅಂದರೆ ದೇವಾಲಯಕ್ಕೆ ಕೆಟ್ಟುಹೋದ ಬೆಲ್ಲ ಪೂರೈಕೆಯಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ನಾಗಮಂಗಲದ ಈ ಹಿಂದಿನ ತಹಶೀಲ್ದಾರ್ ಕುಂಞ ಅಹಮದ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.

ಈ ಹಿಂದೆ ನಾಗಮಂಗಲ ತಹಶೀಲ್ದಾರ್ ಆಗಿದ್ದ ಕುಂಞ ಅಹಮದ್ ಅವರು, ಉಪ ವಿಭಾಗಾಧಿಕಾರಿ ಮೌಖಿಕ ಆದೇಶದ ನೆಪದಲ್ಲಿ ಎಡೆಯೂರು ದೇಗುಲಕ್ಕೆ ಕೆಟ್ಟುಹೋದ ಬೆಲ್ಲ ಸರಬರಾಜು ಮಾಡಿದ್ದಾರೆ ಎನ್ನಲಾಗುತ್ತಿದೆ.ನಾಗಮಂಗಲದಲ್ಲಿರುವ ಮುಳುಕಟ್ಟಮ್ಮ ದೇಗುಲಕ್ಕೆ ಭಕ್ತರು ನೀಡಿದ್ದ ಬೆಲ್ಲವನ್ನೇ ನೀಡಲಾಗಿದೆ ಎನ್ನಲಾಗುತ್ತಿದೆ. ದೇಗುಲದಲ್ಲಿರುವ ಬೆಲ್ಲ ಕೆಟ್ಟು ಹೋಗಿರುವ ಬಗ್ಗೆ RI ( ರಿಸರ್ವ್ ಇನ್ ಸ್ಪೆಕ್ಟರ್ ) ಹಾಗೂ VI ( ವಿಲೇಜ್ ಅಕೌಂಟೆಂಟ್ ) ವರದಿ ನೀಡಿದ್ದಾರೆ. 

ಕೆಟ್ಟು ಹೋದ ಬೆಲ್ಲ ಸರಬರಾಜು ಮಾಡಿದ ತಹಶೀಲ್ದಾರ್ ವಿರುದ್ಧ ಕ್ರಮಕ್ಕೆ ಆಗ್ರಹ ಮಾಡಲಾಗಿದೆ. ಮಂಡ್ಯ ಡಿಸಿಗೆ ಹೋರಾಟಗಾರ ಕೆ.ಆರ್.ರವೀಂದ್ರ ದೂರು ನೀಡಿದ್ದಾರೆ.