ಕಾಡ್ಗಿಚ್ಚಿನ ಕ್ರೌರ್ಯಕ್ಕೆ ಅಮೆರಿಕದ ಲಾಸ್ ಏಂಜಲಿಸ್, ಕ್ಯಾಲಿಫೋರ್ನಿಯಾ ಅಕ್ಷರಶಃ ಕಂಗೆಟ್ಟು ಹೋಗಿದೆ. ಬೆಂಕಿಯ ಕೆನ್ನಾಲಿಗೆಗೆ ಹಾಲಿವುಡ್‌ನ ಕಲಾವಿದರು ಕೋಟಿ ಕೋಟಿ ಬೆಲೆಬಾಳುವ ಬಂಗಲೆಗಳು, ವಿಲ್ಲಾಗಳನ್ನೆಲ್ಲಾ ಕಳೆದುಕೊಂಡು ಕೇವಲ ಜೀವವೊಂದನ್ನೇ ಉಳಿಸಿಕೊಂಡಿದ್ದಾರೆ.

ಪ್ಯಾರಿಸ್ ಹಿಲ್ಟ್, ಡೈರೆಕ್ಟರ್ ಮೆಲ್ ಗಿಬ್ಸನ್, ಹಾಸ್ಯ ನಟ ಬಿಲ್ಲಿ ಕ್ರಿಸ್ಟಲ್ ಕೂಡ ಮನೆ ಕಳೆದುಕೊಂಡಿದ್ದು, ಕನಸಿನ ಸೂರುಗಳನ್ನ ಕಳೆದುಕೊಂಡ ಕಲಾವಿದರು ಕಣ್ಣೀರು ಹಾಕಿದ್ದಾರೆ.

ಕಾಡ್ಗಿಚ್ಚು ತಾನು ಕಾಲಿಟ್ಟಲೆಲ್ಲಾ ಬರಿ ಬೂದಿಯನ್ನ ಮಾತ್ರ ಉಳಿಸಿ ಹೋಗಿದೆ. ಕಂಡೂ ಕೇಳರಿಯದ ರಣ ಭೀಕರ ಪ್ರಕೃತಿಯ ಮುನಿಸಿಗೆ ಗುರುತೇ ಸಿಗದ ಹಾಗೇ ಲಾಸ್ ಏಂಜಲಿಸ್, ಕ್ಯಾಲಿಫೋರ್ನಿಯಾದ ಪರ್ವತಗಳು ಹಿತ್ತಿ ಉರಿದಿದ್ದು, ಬರೀ ಬಸ್ಮವೊಂದೇ ಉಳಿದಿದೆ. ಏಂಜಲೀಸ್‌ನ ಅಲ್ಟಾಡೆನಾ, ಪಸಾಡೆನಾ ಮತ್ತು ಪೆಸಿಫಿಕ್ ಪಾಲಿಸೇಡ್ಸ್‌ನ ಹಾಲಿವುಡ್ ಹಿಲ್ಸ್ ಅನ್ನ ಈ ಭೀಕರ ಕಾಡ್ಗಿಚ್ಚು ಆವರಿಸಿದ್ದು, ಬೆಂಕಿ ಕೆನ್ನಾಲಿಗೆಯನ್ನ 11 ಮಂದಿ ಜೀವಂದ ದಹನವಾಗಿದ್ದಾರೆ.

ಇನ್ನೂ ಕಿಚ್ಚನ್ನ ಸೃಷ್ಟಿಸಿದ್ದು ಸಾಂತಾ ಅನಾ ಎಂದು ಕರೆಯಲಾಗುವ ಶಕ್ತಿಶಾಲಿ ಒಣ ಹವೆ. ಸಾಂತಾ ಅನಾ ಸೃಷ್ಟಿಸಿದ ಒಣಹವೆಯಿಂದ ಪಾಲಿಸೇಡ್ಸ್ನಲ್ಲಿ 19 ಸಾವಿರದ 978 ಎಕರೆ, ಈಟನ್ನಲ್ಲಿ 13 ಸಾವಿರದ 956 ಎಕರೆ, ಕೆನ್ನೆತ್ನಲ್ಲಿ 906 ಎಕರೆ, ಹರ್ಸ್ಟ್ನಲ್ಲಿ 771 ಎಕರೆ, ಲಿಡಿಯಾದಲ್ಲಿ 394 ಎಕರೆ ಭೂಮಿ ಹೊತ್ತಿ ಉರಿದಿದೆ.

ಇನ್ನೂ ಜೀವವನ್ನೇ ಪಣಕ್ಕಿಟ್ಟು ಸುಮಾರು 10,000ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ. 600ಕ್ಕೂ ಹೆಚ್ಚು ಕ್ಯಾಲಿಫೋರ್ನಿಯಾ ನ್ಯಾಷನಲ್ ಗಾಡ್ರ್ೞ. 1,059 ಅಗ್ನಿಶಾಮಕ ಯಂತ್ರ. 143 ನೀರಿನ ಟ್ಯಾಂಕರ್ಸ್. 116 ಬುಲ್ಡೋಜರ್.. ಹೆಲಿಕಾಪ್ಟರ್‌ಗಳು ಮತ್ತು ಏರ್ ಟ್ಯಾಂಕರ್‌ಗಳು ಬೆಂಕಿ ನಂದಿಸುವ ಮಹಾ ಸಾಹಸಕ್ಕೆ ಕೈಹಾಕಿದ್ದಾರೆ.