ವಿದೇಶ

ಟ್ಯಾಕ್ಸ್‌ ವಾರ್‌ ಮಧ್ಯೆ ಮೋದಿ & ಟ್ರಂಪ್‌ ಭೇಟಿಗೆ ಮುಹೂರ್ತ ಫಿಕ್ಸ್‌

ಡೋನಾಲ್ಡ್‌ ಟ್ರಂಪ್ ಎರಡನೇ ಅವಧಿಗೆ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಇದು ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ದ್ವಿಪಕ್ಷೀಯ ಭೇಟಿಯಾಗಲಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭೇಟಿಗೆ ಮಹೂರ್ತ ನಿಗಧಿಯಾಗಿದೆ. ಮೋದಿ ಅವರು ಫೆಬ್ರವರಿ 12 ರಿಂದ ಎರಡು ದಿನಗಳ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ಡೊನಾಲ್ಡ್ ಟ್ರಂಪ್ ಜೊತೆ ವ್ಯಾಪಾರ ಮತ್ತು ರಕ್ಷಣೆ ಸೇರಿದಂತೆ ಹಲವು ವಿಷಯಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ಪ್ಯಾರಿಸ್ ಪ್ರವಾಸ ಮುಗಿಸಿದ ನಂತರ ಅಮೆರಿಕದ ವಾಷಿಂಗ್ಟನ್ ಡಿಸಿಗೆ ಪ್ರಧಾನಿ ನರೇಂದ್ರ ಮೋದಿ ಪ್ರಯಾಣ ಬೆಳೆಸಲಿದ್ದಾರೆ. ಫೆಬ್ರವರಿ 12ರ ಸಂಜೆ ಮೋದಿ ಅಮೆರಿಕಗೆ ಆಗಮಿಸಲಿದ್ದು ಮರುದಿನ ಟ್ರಂಪ್ ಜೊತೆ ಮಾತುಕತೆ ನಡೆಸುವ ನಿರೀಕ್ಷೆಯಿದೆ. ಡೋನಾಲ್ಡ್‌ ಟ್ರಂಪ್ ಎರಡನೇ ಅವಧಿಗೆ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಇದು ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ದ್ವಿಪಕ್ಷೀಯ ಭೇಟಿಯಾಗಲಿದೆ. ಭಾರತ ಸೇರಿ ಹಲವು ರಾಷ್ಟ್ರಗಳ ವಿರುದ್ಧ ಹೆಚ್ಚಿನ ಸುಂಕ ವಿಧಿಸೋದಾಗಿ ಡೋನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಈ ಮಧ್ಯೆ ಮೋದಿ ಅಮೆರಿಕ ಪ್ರವಾಸ ನಿರೀಕ್ಷೆ ಹೆಚ್ಚಿಸಿದೆ.