ದೇಶ

ಭಿಕ್ಷುಕನಂತೆ ಬೀದಿ ಸುತ್ತುತ್ತಿದ್ದಾರೆ ಅಮಿರ್‌ಖಾನ್‌.. ಮಿಸ್ಟರ್‌ ಪರ್ಫೆಕ್ಟ್‌ ಕಂಡು ಅಯ್ಯೋ ಎಂದ ಫ್ಯಾನ್ಸ್‌

ಮುಂಬೈನ ಐಷಾರಾಮಿ ಬಂಗಲೆಯಲ್ಲಿ ವಾಸಿಸುವ ಆಮಿರ್‌ಖಾನ್, ಬಾಲಿವುಡ್‌ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರು. ಅವರ ಒಟ್ಟು ಸಂಪತ್ತು ಸುಮಾರು 1900 ಕೋಟಿ ರೂಪಾಯಿ ಎನ್ನಲಾಗುತ್ತೆ. ಸೆಲೆಬ್ರಿಟಿಗಳ ಹತ್ತಿರ ಎಲ್ಲವೂ ಇರುತ್ತೆ.. 3 ದಶಕಗಳಿಗೂ ಹೆಚ್ಚು ಕಾಲ ಬಾಲಿವುಡ್‌ನಲ್ಲಿ ಆಕ್ಟೀವ್‌ ಆಗಿದ್ದಾರೆ.

ಬಾಲಿವುಡ್‌ನ ಮಿಸ್ಟರ್‌ ಪರ್ಫೆಕ್ಟ್‌ ಅಂತಾನೇ ಕರೆಸಿಕೊಳ್ಳುವ ಆಮೀರ್‌ ಖಾನ್‌ ವಿಡಿಯೋ ವೈರಲ್‌ ಆಗ್ತಿದೆ.. ಭಿಕ್ಷುಕನ ರೂಪದಲ್ಲಿ ಮುಂಬೈನ ಬೀದಿ-ಬೀದಿಗಳಲ್ಲಿ ಖ್ಯಾತ ನಟ ಸುತ್ತಿರೋದು ಕಂಡು ಫ್ಯಾನ್ಸ್‌ ಶಾಕ್‌ ಆಗಿದ್ದಾರೆ. ರಸ್ತೆಯಲ್ಲಿ ಆಮೀರ್‌ ಖಾನ್‌ ಹೀಗೆ ಓಡಾಡ್ತಿದ್ರೆ, ಜನರಿಗೆ ಸಣ್ಣ ಗುರುತು ಸಹ ಸಿಕ್ಕಿಲ್ಲ. ನಂತ್ರ ಆಮೀರ್‌ಖಾನ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್‌ ಮಾಡಿದ್ಮೇಲೆಯೇ ಎಲ್ಲರಿಗೂ ಗೊತ್ತಾಗಿದೆ. ಭಿಕ್ಷುಕನ ರೀತಿ ಓಡಾಡೋಕೆ ಅಮೀರ್‌ಖಾನ್‌ಗೆ ಏನ್‌ ಆಯ್ತು ಅಂತಾ ಗೊಂದಲಕ್ಕೆ ಒಳಗಾಗಿದ್ದಾರೆ.

ಮುಂಬೈನ ಐಷಾರಾಮಿ ಬಂಗಲೆಯಲ್ಲಿ ವಾಸಿಸುವ ಆಮಿರ್‌ಖಾನ್, ಬಾಲಿವುಡ್‌ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರು. ಅವರ ಒಟ್ಟು ಸಂಪತ್ತು ಸುಮಾರು 1900 ಕೋಟಿ ರೂಪಾಯಿ ಎನ್ನಲಾಗುತ್ತೆ. ಸೆಲೆಬ್ರಿಟಿಗಳ ಹತ್ತಿರ ಎಲ್ಲವೂ ಇರುತ್ತೆ.. 3 ದಶಕಗಳಿಗೂ ಹೆಚ್ಚು ಕಾಲ ಬಾಲಿವುಡ್‌ನಲ್ಲಿ ಆಕ್ಟೀವ್‌ ಆಗಿದ್ದಾರೆ. ನಟ ಆಮೀರ್‌ಖಾನ್‌, ಫಿಲ್ಮ್‌ಗಳು ಬಾಕ್ಸ್‌ಆಫೀಸ್‌ನಲ್ಲಿ ಕಮಾಲ್‌ ಮಾಡಿವೆ. ಹೀಗಿರುವಾಗ ಮಿಸ್ಟರ್‌ ಪರ್ಫೆಕ್ಟ್‌  ಭಿಕ್ಷುಕನ ರೀತಿ ಬೀದಿ-ಬೀದಿ ಸುತ್ತಿದ್ದು ಏಕೆ ಅನ್ನೋದು ಅಭಿಮಾನಿಗಳಿಗೆ ಯಕ್ಷ ಪ್ರಶ್ನೆಯಾಗಿದೆ.

ಹೌದು.. ಆದಿ ಮಾನವನಂತೆ ವೇಷ ಧರಿಸಿ ಮುಂಬೈನಲ್ಲಿ ಆಮೀರ್‌ ಓಡಾಡಿದ್ದಾರೆ.. ಕೆದರಿದ ತಲೆ ಕೂದಲು, ಮೈಗೆ ಪ್ರಾಣಿಗಳ ಚರ್ಮದಂತಹ ವಸ್ತ್ರ ಸುತ್ತಿಕೊಂಡಿದ್ದಾರೆ. ಭಾರವಾದ ಶೂ ಧರಿಸಿ, ಮುಂಬೈನ ಜನಜಂಗುಳಿಯಲ್ಲಿ ಕೈಗಾಡಿಯನ್ನು ತಳ್ಳಿದ್ದಾರೆ. ಅಷ್ಟೇ ಅಲ್ಲ. ರೋಡ್‌ ಸೈಡ್‌ ಅಂಗಡಿಯ ಬಳಿ ತೆರಳಿ ಊಟ ಕೇಳಿದ್ದಾರೆ. ಇನ್ನು ಕೆಲ ಕಡೆ ತಮಾಷೆಯನ್ನೂ ಮಾಡಿದ್ದಾರೆ. ಆದರೆ, ತಮ್ಮ ಕಣ್ಣೆದುರು ಇರುವುದು ಅಮೀರ್ ಖಾನ್ ಎಂದು ಗುರುತಿಸದ ಅನೇಕರು ಮಾನಸಿಕ ಅಸ್ವಸ್ಥ ಎಂದುಕೊಂಡು ಅಮೀರ್ ಖಾನ್ ಅವರಿಂದ ದೂರ ಓಡಿ ಹೋಗಿರೋದು ಮಾತ್ರವಲ್ಲ ಹಿಡಿಶಾಪ ಹಾಕಿದ್ದಾರೆ.

ಭಿಕ್ಷುಕನ ರೀತಿ ಆಮೀರ್‌ಖಾನ್‌ ಹೀಗೆ ಸುತ್ತಾಡಿದ್ದು ಏಕೆ ಅನ್ನೋದು ಇನ್ನೂ ಸಸ್ಪೆನ್ಸ್‌ ಆಗಿದೆ.. ಒಬ್ಬೊಬ್ಬರು ಒಂದೊಂದು ರೀತಿ ಕಾಮೆಂಟ್‌ ಮಾಡ್ತಿದ್ದಾರೆ. ಅಂದ್ಹಾಗೇ ಅಮೀರ್ ಖಾನ್ ಈ ತರಹದ ಪ್ರಯತ್ನ-ಪ್ರಯೋಗಗಳನ್ನು ತಮ್ಮ ಚಿತ್ರಕ್ಕೆ ಮಾಡ್ತಾರೆ. ಹೀಗಾಗಿಯೇ ಇದು ಕೂಡ ಯಾವುದಾದರೂ ಸಿನಿಮಾಗೆ ಸಂಬಂಧಿಸಿದ್ದು ಅಂತಾ ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಮತ್ತೆ ಕೆಲವರು ಅಮೀರ್‌ಖಾನ್‌ ತಮ್ಮ ಮಗನ ಚಿತ್ರಕ್ಕಾಗಿ ಮಾಡ್ತಿರುವ ಪಬ್ಲಿಸಿಟಿ ಅಂತಾ ಹೇಳಿದ್ದಾರೆ. ಫೆಬ್ರವರಿ 7ರಂದು ಅಮೀರ್ ಖಾನ್ ಅವರ ಮಗ ಜುನೈದ್ ಖಾನ್ ಅಭಿನಯದ 'ಲವ್ಯಪಾ' ಚಿತ್ರ ರಿಲೀಸ್‌ ಆಗ್ತಿದೆ. ಹೀಗಾಗಿ ಮಗನ ಚಿತ್ರಕ್ಕಾಗಿ ಮಿಸ್ಟರ್‌ ಪರ್ಫೆಕ್ಟ್‌, ಪ್ರಚಾರ ತಂತ್ರವಾಗಿ ಬೀದಿಬೀದಿ ಸುತ್ತಿದ್ದಾರೆ ಅಂತಾ ಕಾಮೆಂಟ್‌ ಮಾಡಿದ್ದಾರೆ.

ಸದ್ಯ ಆದಿಮಾನವನಂತೆ ಅಮೀರ್ ಖಾನ್ ಮುಂಬೈನ ಬೀದಿ ಬೀದಿಯಲ್ಲಿ ಸುತ್ತಾಡಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಆದಿ ಮಾನವನಂತೆ ಅಮೀರ್ ಖಾನ್ ಮೇಕಪ್ ಮಾಡಿಕೊಳ್ಳುತ್ತಿರುವ ಫೋಟೊಗಳು ವೈರಲ್ ಆದ ನಂತರ ಅಯ್ಯೋ, ನಮ್ಮ ಕಣ್ಣೆದುರು ಅಮೀರ್ ಖಾನ್ ಇದ್ದರೂ ನಾವು ಗುರುತಿಸಲಿಲ್ಲವಲ್ಲಾ ಎಂದು ಕೆಲವರು ಚಡಪಡಿಸಿದ್ದಾರೆ.