ರಾಯಚೂರು: ಅತ್ಯಾಚಾರಕ್ಕೆ ನಿರಾಕರಿಸಿದ ಸೊಸೆಯನ್ನೇ ಕಾಮುಕ ಮಾವ ಕೊಂದು ಹಾಕಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಜುಲಮಗೇರಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತ ಮಹಿಳೆಯನ್ನು 27 ವರ್ಷದ ದುಳಮ್ಮ ಎಂದು ಗುರುತಿಸಲಾಗಿದೆ. ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ ಮಾವ ಸಂತುಳ್ಳ ರಾಮಲಿಂಗಯ್ಯ ಕುಂಡಫಾಲಯ್ಯ ಪರಾರಿಯಾಗಿದ್ದಾನೆ.
ಕಾಮುಕ ಮಾವ ರಾಮಲಿಂಗಯ್ಯ, ದುಳಮ್ಮ ಪತಿ ಕುರಿ ಕಾಯಲು ಹೋದಾಗ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಾವ ಸಂತುಳ್ಳ ರಾಮಲಿಂಗಯ್ಯ ಕುಂಡಫಾಲಯ್ಯ ಸೊಸೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದಕ್ಕೆ ಸೊಸೆ ದುಳಮ್ಮ ನಿರಾಕರಿಸಿದಾಗ ಆಕೆಯ ತಲೆಗೆ ಸಲಾಕೆಯಿಂದ ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.